ರೈಲ್ವೇ ಬೇಡಿಕೆಗಳ ಮನವಿ ಸಲ್ಲಿಸಲು ಮಾ.13 ಕ್ಕೆ ದೆಹಲಿಗೆ ನಿಯೋಗ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಈ ಭಾಗದಲ್ಲಿನ ರೈಲ್ವೇ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ರೈಲ್ವೇ ಕ್ರಿಯಾ ಸಮಿತಿಯ ನಿಯೋಗ ಮಾ.13 ರಂದು ದೆಹಲಿಗೆ ನಿಯೋಗ ತೆರಳಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಹೇಳಿದ್ದಾರೆ.
ಅವರಿಂದು ವೀರಶೈವ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ. ಬಳ್ಳಾರಿಯ ರೈಲ್ವೇ ನಿಲ್ದಾಣದ ಮೂಲಕ ಸಂಚರಿಸುವ ಎಲ್ಲಾ ವಿಶೇಷ ರೈಲುಗಳನ್ನು ಖಾಯಂ ಮಾಡಬೇಕು. ಮಾರ್ಗಗಳನ್ನು ವಿಸ್ತರಿಸಬೇಕು.‌ ಬಳ್ಳಾರಿಯಲ್ಲಿ ರೈಲುಗಳನ್ನು ಸ್ವಚ್ಚಗೊಳಿಸುವ ಪುಟ್ ವ್ಯವಸ್ಥೆ ಮಾಡಬೇಕು. ಬಳ್ಳಾರಿ ಬೈ ಪಾಸ್ ನಿಲ್ದಾಣ ನಿರ್ಮಿಸಬೇಕು. ಬಳ್ಳಾರಿ ರೈಲು ನಿಲ್ದಾಣದಲ್ಲಿನ ಗೂಡ್ ಶೆಡ್ ನ್ನು ಸ್ಥಳಾಂತರಿಸಬೇಕು. ರೈಲ್ವೇ ಕೋಚಿಂಗ್ ಡಿಪೋ ಆರಂಭಿಸಬೇಕು. ಇನ್ನೂ ಎರೆಡು ಪ್ಲಾಟ್ ಫಾರಂ ನಿರ್ಮಿಸಬೇಕು. ನಿಲ್ದಾಣದ ಮುಂದೆ ಗಾಂಧೀಜಿ ಪ್ರತಿಮೆ ಸ್ಥಾಪಿಸಿ, ಗವಿಯಪ್ಪ ವೃತ್ತದಿಂದ ಕೋಟೆ ರಿಪಬ್ಲಿಕ್‌ ಸರ್ಕಲ್ ಗೆ ಸ್ಕೈವಾಕ್ ನಿರ್ಮಿಸಬೇಕು. ನಗರದ ಎರಡನೇ ಗೇಟ್ ಗೆ ಸಂಪರ್ಕ ಸೇತುವೆ ನಿರ್ಮಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ರೈಲ್ವೇ ಸಚಿವರಿಗೆ, ಮಂಡಳಿಗೆ ಮನವಿ ಸಲ್ಲಿಸಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಹಲವು ಮುಖಂಡರು ಇದ್ದರು.

One attachment • Scanned by Gmail