ರೈಲ್ವೇ ಬಳಕೆದಾರರ ಸಲಹೆಗಾರರಾಗಿ ವಿ.ರವಿಕುಮಾರ್ ನಾಮ ನಿರ್ದೇಶನ


(ಸಂಜೆ ವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ವಿ.ರವಿಕುಮಾರ್ ಅವರು  01-02-2023 ರಿಂದ 31-03-2025  ನೈಋತ್ಯ ರೈಲ್ವೇಯ ವಿಭಾಗೀಯ  ಬಳಕೆದಾರರ ಸಲಹೆಗಾರರಾಗಿ ನಾಮನಿರ್ದೇಶನವಾಗಿರುತ್ತಾರೆ.                               
ಈ ಹಿನ್ನೆಲೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್,  ಗೌರವ ಕಾರ್ಯದರ್ಶಿಗಳಾದ, ಯಶ್‍ವಂತ್ ರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಬಿ.ಮಹಾರುದ್ರಗೌಡ, ಉಪಾಧ್ಯಕ್ಷರಗಳಾದ ಎ.ಮಂಜುನಾಥ್, ಕೆ.ರಮೇಶ್ ಬುಜ್ಜಿ, ಕೆ.ಸಿ.ಸುರೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಸೊಂತ್ ಗಿರಿಧರ್, ಹಾಗೂ ಖಜಾಂಚಿಗಳಾದ ಪಿ.ಪಾಲಣ್ಣ, ಎಲ್ಲಾ ಪದಾಧಿಕಾರಿಗಳು, ಎಲ್ಲಾಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿ.ರವಿಕುಮಾರ ಇವರಿಗೆ ತುಂಬು ಹೃದಯದ ಅಭಿನಂದನೆಗಳು ತಿಳಿಸಿರುತ್ತಾರೆ.