ರೈಲ್ವೆ ಹಳಿ ಬಳಿ ಕಸ ಸ್ವಚ್ಚಗೊಳಿಸಲು ಒತ್ತಾಯ

ಬಂಗಾರಪೇಟೆ,ಮೇ೧೮:ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್‌ಪಾಸ್ ಅವ್ಯವಸ್ಥೆ ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಚನೆ ಮಾಡುವ ಜೊತೆಗೆ ರೈಲ್ವೆ ಟ್ರಾಕ್ ಅಕ್ಕಪಕ್ಕದಲ್ಲಿ ಸುರಿಯುತ್ತಿರುವ ಕಸವನ್ನು ಸ್ವಚ್ಚಗೊಳಿಸಿ ಮುಳ್ಳು ತಂತಿಯನ್ನು ಅಳವಡಿಸಿ ಜಾನುವಾರುಗಳನ್ನು ರಕ್ಷಣೆ ಮಡಬೇಕೆಂದು ರೈತ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೋಲಾರ ರೈಲ್ವೆ ಟ್ರಾಕ್ ಹಾದು ಹೋಗುವ ಕೀಲುಕೋಟೆ, ಟವರ್, ವ್ಯಾಪ್ತಿಯಲ್ಲಿ ಸುತ್ತಮುತ್ತಲ ಮನೆಯವರು ಕಸವನ್ನೇ ರೈಲ್ವೆ ಹಳಿಗಳ ಮೇಲೆ ಸುರಿದಿರುವ ಕಸದ ರಾಶಿಯಲ್ಲಿ ಮೇವಿಗಾಗಿ ಜಾನುವಾರುಗಳು ರೈಲ್ವೆ ಕಂಬಿಗಳ ಮೇಲೆ ನಿಲ್ಲುತ್ತಿರುವುದರಿಂದ ಹಾದು ಹೋಗುವ ರೈಲಿಗೆ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳುವ ಜೊತೆಗೆ ರಾತ್ರಿ ವೇಳೆ ಕೆಲವು ಯುವಕರು ಕಂಬಿಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದರೂ ಇದುವರೆಗೂ ಸಮಸ್ಯೆಯನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಲ್ಲವೆಂದು ರೈಲ್ವೆ ಅವ್ಯವಸ್ಥೆಗಳ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಅಂಡರ್ ಪಾಸ್‌ಗಳು ಯಾವುದೇ ಮುಂಜಾಗ್ರತೆ ಇಲ್ಲದೆ ಸ್ಥಳೀಯರ ಜೊತೆ ಚರ್ಚೆ ಮಾಡದೆ ತಮಗೆ ಇಷ್ಟ ಬಂದ ರೀತಿ ಎಲ್ಲಿ ಬೇಕೋ ಅಲ್ಲಿ ಮಳೆ ನೀರು ಸರಾಗವಾಗಿ ಹರಿದು ಪಕ್ಕದ ರಾಜಕಾಲುವೆ ಇಲ್ಲ ಚಿಕ್ಕಕಾಲುವೆಗಳಿಗೆ ಹೋಗಬೇಕಾದ ದಾರಿಯಿಲ್ಲದೆ ಅಂಡರ್ ಪಾಸ್‌ಗಳನ್ನು ನಿರ್ಮಿಸಿರುವುದರಿಂದ ಮುಂಗಾರು ಮಳೆ ಪ್ರಾರಂಭವಾದರೆ ಅಂಡರ್ ಪಾಸ್ ಸುತ್ತಮುತ್ತಲಿರುವ ಗ್ರಾಮೀಣ ಪ್ರದೇಶದ ರೈತರು ವಿದ್ಯಾರ್ಥಿಗಳು ವ್ಯಾಪಾರಸ್ತರಿಗೆ ಮುಳವಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರೈಲ್ವೆ ಅಧಿಕಾರಿಗಳು ಜನ ಸಾಮಾನ್ಯರ ತೆರಿಗೆ ಹಣವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದರೆ ಆಕಾಶಕ್ಕೆ ಕೋಟಿ ಕೋಟಿ ಹಣವನ್ನು ವೆಚ್ಚಾ ಮಾಡಿ ಚಪ್ಪರ ಹಾಕಿದಂತೆ ಅಂಡರ್‌ಪಾಸ್‌ಗಳಿಗೆ ಶಾಶ್ವತ ಪರಿಹಾರ ಹುಡುಕುವುದನ್ನು ಬಿಟ್ಟು ಕಬ್ಬಿಣದ ರೇಖುಗಳ ಮೂಲಕ ಮೇಲ್ಛಾವಣಿಯಂತೆ ಚಪ್ಪರವನ್ನು ಹಾಕಲು ಮುಂದಾಗಿರುವುದು ನಾಚಿಕೆಗೇಡು ಎಂದು ಕಿಡಿ ಕಾರಿದರು. .
೪೮ ಗಂಟೆಗಳ ಜಿಲ್ಲಾಧ್ಯಂತ ಹದಗೆಟ್ಟಿರುವ ಅವೈಜ್ಞಾನಿಕ ಅಂಡರ್‌ಪಾಸ್‌ಗಳನ್ನು ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್‌ಪಾಷ, ಕಿರಣ್, ಬಾಬಾಜಾನ್, ಆರೀಪ್, ಜಾವೇದ್, ಮುನಿಯಪ್ಪ, , ಸಂದೀಪ್‌ರೆಡ್ಡಿ,ಸಂದೀಪ್‌ಗೌಡ, ರಾಮಸಾಗರ ವೇಣು, ಕಿರಣ್, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ವಿಶ್ವ, ಮುನಿರಾಜು, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲಜ, ರತ್ನಮ್ಮ, ಮುಂತಾದವರಿದ್ದರು.