ರೈಲ್ವೆ ಸುರಕ್ಷತೆ ತಂತ್ರಜ್ಞಾನ ಬಳಕೆ ಮೇಲ್ದರ್ಜೆಗೆ:ಎಡಿಜಿಪಿ ಭಾಸ್ಕರರಾವ್

ಕಲಬುರಗಿ,ಮೇ.28:ರೈಲ್ವೆ ಪ್ರಯಾಣಿಕರ ಮತ್ತು ರೈಲುಗಳ ಸುರಕ್ಷತೆ ಹಾಗೂ ಭದ್ರತೆ ಇನ್ನಷ್ಟು ಬಲಗೊಳಿಸಲು ತಂತ್ರಜ್ಞಾನ ಬಳಕೆ ಮಾಡಿಕೊಂಡು ಸುರಕ್ಷತೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಎಂದು ರೈಲ್ವೆ ಎಡಿಜಿಪಿ ಭಾಸ್ಕರರಾವ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಹಾಗೂ ಜಿ-99 ತಂಡದಿಂದ ಮತ್ತು ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ವತಿಯಿಂದ ರೈಲ್ವೆ ಕಾರ್ಮಿಕರಿಗೆ ನೀಡಿರುವ ಸುಮಾರು 18 ಕೆಜಿ ವಿವಿಧ ದಿನಸಿ ಹೊಂದಿರುವ ಕಿಟ್‍ಗಳನ್ನು ರೈಲ್ವೆ ಕಾರ್ಮಿಕರಿಗೆ ವಿತರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಕುರಿತು ವಿಸ್ತೃತ ಯೋಜನೆ ಹಾಕಿಕೊಂಡು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈಗದು ರೈಲ್ವೆ ಮಂಡಳಿಯ ಮುಂದಿದೆ. ಅಲ್ಲಿ ಅನುಮೋದನೆ ಸಿಕ್ಕ ನಂತರ ಆಧುನೀಕರಣಗೊಳಿಸುವ ಕೆಲಸ ಶುರುವಾಗಲಿದೆ. ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಅರ್ಧದಷ್ಟು ಅನುದಾನ ನೀಡಲಿವೆ ಎಂದು ತಿಳಿಸಿದರು.
ರೈಲ್ವೆ ಗೇಟ್‍ಗಳನ್ನು ಸ್ವಯಂ ಚಾಲಿತ ನಿರ್ವಹಣೆ ಮಾಡುವುದು. ಜತೆಗೆ ರೈಲು ಹಳಿಗಳ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಹೀಗೆ ಹಲವು ರೀತಿಯಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇಂತಹ ಅವಘಡಗಳನ್ನು ತಪ್ಪಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಭಾಸ್ಕರರಾವ ಹೇಳಿದರು.
ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪ್ರಮುಖ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿರುವ ಕೆಲಸ ಕೈಗೊಂಡಿz್ದÉೀನೆ. ಈಗಾಗಲೇ ಬಳ್ಳಾರಿ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ ನಿಲ್ದಾಣಕ್ಕೆ ಭೇಟಿ ನೀಡಿz್ದÉೀನೆ. ಶುಕ್ರವಾರ ಬೀದರ್, ಹುಮನಾಬಾದ ಇನ್ನಿತರ ನಿಲ್ದಾಣಗಳನ್ನು ಸಹ ಪರಿಶೀಲಿಸುವೆ ಎಂದು ಪ್ರಶ್ನೆಯೊಂದಕ್ಕೆ ಭಾಸ್ಕರರಾವ್ ತಿಳಿಸಿದರು.
ಕರೊನಾ ನಿಯಂತ್ರಿಸಲು ವೈದ್ಯರು ಇನ್ನಿತರರು ಒಳಗಡೆ ಶ್ರಮಿಸುತ್ತಿದ್ದರೆ, ಹೊರಗಡೆ ಪೆÇಲೀಸರು ಕರೊನಾ ವಾರಿಯರ್ಸ್‍ಗಳಾಗಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ 160 ಜನ ಪೆÇಲೀಸರು ಕರೊನಾಕ್ಕೆ ಬಲಿಯಾದರೂ, ಧೃತಿಗೆಡದೆ, ತಮ್ಮ ಸಮಸ್ಯೆಗಳನ್ನು ಬದಿಗಿಸಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಧೈರ್ಯವನ್ನು ಮೆಚ್ಚುವಂತಹುದು. ಜನರು ಸಹ ಸಹಕಾರ ನೀಡುವ ಮೂಲಕ ಕರೊನಾ ನಿಯಂತ್ರಿಸುವ ಕಾರ್ಯಕ್ಕೆ ಪೆÇಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರೊನಾ 2ನೇ ಅಲೆ ಶುರುವಾದ 48 ದಿನಗಳಲ್ಲಿ 48 ಜನ ಪೆÇಲೀಸ್ ಸಿಬ್ಬಂದಿಯನ್ನು ಕಳೆದಕೊಂಡಿz್ದÉೀವೆ. ಇದು ನೋಡಿದಾಗ ದಿನಕ್ಕೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನೋವಿನಿಂದ ಭಾಸ್ಕರರಾವ ಹೇಳಿಕೊಂಡರು. ಪೆÇಲೀಸರಿಗೆ ಸಾಕಷ್ಟು ಸುರಕ್ಷಾ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.
ಎಚ್‍ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪ, ರೈಲ್ವೆ ಡಿಎಸ್ಪಿ ವೆಂಕನಗೌಡ ಪಾಟೀಲ್, ಸಿಪಿಐ ರಮೇಶ ಕಾಂಬಳೆ, ರೈಲ್ವೆ ಸುರಕ್ಷಾ ಬಲ ಅಧಿಕಾರಿ ಪೂರಸ್‍ಕುಮಾರ, ಜನವಾಡ, ನಾರಾಯಣಾಚಾರ್ಯ ಜೋಶಿ ಮೊದಲಾದವರಿದ್ದೆರು.