
ನವದೆಹಲಿ,ಜ.20- ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ 42,370 ಕೋಟಿ ರೂ ಆದಾಯ ಗಳಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೃಷ್ಣವ್ ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಸಾಧಿಸಿದ ಆದಾಯಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಇಲ್ಲಿಯವರೆಗೆ 42,370 ಕೋಟಿ ರೂಪಾಯಿ ಹೆಚ್ಚು ಆದಾಯ ಸಂಗ್ರಹಿಸಿದೆ ಎಂದು ಹೇಳಿದ್ದಾರೆ.
2021-22 ರ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೇ ಒಟ್ಟು ಒಂದು ಲಕ್ಷದ 91 ಸಾವಿರದ 128 ಕೋಟಿ ರೂಪಾಯಿಗಳ ಆದಾಯ ಸಾಧಿಸಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ 42ಸಾವಿರಕ್ಕೂ ಹೆಚ್ಚು ಆದಾಯ ಗಳಿಸಿದೆ ಎಂದಿದ್ದಾರೆ.
ಪ್ರಸಕ್ತ ಹಣಕಾಸು ವರ್ಷ 2022-23 ಪೂರ್ಣಗೊಳ್ಳುವ 71 ದಿನಗಳ ಮೊದಲು ಈ ಸಾಧನೆ ಮಾಡಲಾಗಿದೆ . ಹಣಕಾಸು ವರ್ಷ ಪೂರ್ಣಗೊಳ್ಳುವ ವರೆಗೂ ಮತ್ತಷ್ಟು ಸಾಧನೆ ಮಾಡಲಿದೆ ಎಂದು ಸಚಿವರು ಭಾರತೀಯ ರೈಲ್ವೆತ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆ ಸರಕು ಮತ್ತು ಸೇವೆ , ಪ್ರಯಾಣಿಕರ ಸಾಗಾಣ ಸೇರಿದಂತೆ ವಿವಿಧ ಮೂಲಗಳಿಂದ 2020-21 ಹಣಕಾಸು ವರ್ಷದಲ್ಲಿ ಸಂಗ್ರಹ ಮಾಡಿದ್ದ ಆದಾಯಕ್ಕಿಂತ ಸರಿ ಸುಮಾರು 43 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹ ಮಾಡಿದೆ ಎಂದು ಅವರು ಹೇಳಿದ್ದಾರೆ.