ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆಗಳನ್ನು ತರಲು ಬದ್ಧ: ಸಂಸದ ಡಾ.ಜಾಧವ ಭರವಸೆ

ಕಲಬುರಗಿ,ಏ.7- ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರದಲ್ಲಿ ಸುಮಾರು ಮೂರುವರೆ ದಶಕಗಳ ಪೂರ್ವದಲ್ಲಿಯೇ ಸರಿನ್ ಕಮಿಟಿ ವರದಿಯಂತೆ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯಾಗಬೇಕಾಗಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಆಗಿಲ್ಲವೆಂಬುವುದು ನಾವೆಲ್ಲರೂ ಒಪ್ಪಬೇಕಾದ ವಿಷಯವಾಗಿದೆ. ಬರುವ ದಿನಗಳಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆಗಳು ಸೇರಿದಂತೆ ಕಲ್ಯಾಣ ಕರ್ನಾಟಕಕ್ಕೆ ತರುವುದರ ಬಗ್ಗೆ ತಾವು ಸವಾಲಾಗಿ ಸ್ವೀಕರಿಸುವುದಾಗಿ ಸಂಸದ ಡಾ.ಉಮೇಶ ಜಾಧವ ಅವರು ಭರವಸೆ ನೀಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಲ್ಯಾಣ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಘೋಷಣೆಯಂತೆ ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾವನ್ನು ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ನೇತೃತ್ವದ ನಿಯೋಗ ಇಲ್ಲಿನ ಸಂಸದರ ನಿವಾಸಕ್ಕೆ ಭೇಟಿಮಾಡಿದಾಗ ಅವರು ಈ ಭರವಸೆ ನೀಡಿದರು.
ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಮಾತನಾಡಿ ಕೇಂದ್ರ ಸರಕಾರ ನಿರಂತರವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಯಿ ಧೋರಣೆ ಮಾಡುತ್ತಿದೆ, ರೈಲ್ವೆ ವಿಭಾಗಿಯ ಕಚೇರಿಗೆ ತಿರಸ್ಕಾರ, ಏಮ್ಸ್ ಬೇರೆಡೆಗೆ ಸ್ಥಳಾಂತರ ಮಾಡುವುದು, ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್ ಫಾರ ಎಕ್ಸಲೆನ್ಸಿಯ ಸ್ಥಳಾಂತರ, ಕೇಂದ್ರದ ವಿಶೇಷ ಯೋಜನೆಗಳಡಿ ಕಲ್ಯಾಣ ಕರ್ನಾಟಕಕ್ಕೆ ನಿರ್ಲಕ್ಷತನ, ಕೇಂದ್ರ ಮಂತ್ರಿ ಮಂಡಲದಲ್ಲಿ ನಿರ್ಲಕ್ಷತನ, ಒಟ್ಟಾರೆ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕಕ್ಕೆ ನಿರ್ಲಕ್ಷ ಮಲತಾಯಿ ಧೋರಣೆ ಮಾಡುತ್ತಿರುವುದು ಕಲ್ಯಾಣ ಕರ್ನಾಟಕದ ಜನರಿಗೆ ನೋವು ಉಂಟಾಗಿ ಪ್ರತ್ಯೇಕ ರಾಜ್ಯ ಕೇಳುವ ಹಂತಕ್ಕೆ ಬರಲಾಗಿದೆ ಎಂದು ಸಂಸದರ ಎದುರು ನಮ್ಮ ಭಾಗಕ್ಕೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯದ ಬಗ್ಗೆ ವಿವರವಾಗಿ ಚರ್ಚಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ ಜಾಜು, ಜ್ಞಾನಮಿತ್ರ, ಸಂಧ್ಯಾರಾಜ ಸ್ಯಾಮ್ಯುವೆಲ್, ಅಸ್ಲಂ ಚೌಂಗೆ, ಶಾಂತಪ್ಪ ಕಾರಭಾಸಗಿ, ಅಬ್ದುಲ ರಹೀಮ್, ಸಾಬಿರ ಅಲಿ, ಡಾ. ಮಾಜಿದ್ ದಾಗಿ, ಬಾಬುರಾವ ಗಂವಾರ್, ಇವರೂ ಸಹ ಮಾನ್ಯ ಸಂಸದರಿಗೆ ಕಲಬುರಗಿ ಜಿಲ್ಲೆಗೆ ರೈಲ್ವೆ ವಿಭಾಗಿಯ ಕಚೇರಿ ನೆನೆಗುದಿಗೆ ಬಿದ್ದಿರುವುದರಿಂದ ಜನರಲ್ಲಿ ಉಂಟಾಗಿರುವ ಅಸಮಧಾನದ ಬಗ್ಗೆ ವಿವರಿಸಿ ಭವಿಷ್ಯದಲ್ಲಿ ಸಂಸದರು ಸರಕಾರದ ಮುಂದೆ ನಮ್ಮ ಹಕ್ಕಿನ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ, ಏಮ್ಸ, ನೀಮ್ಝ್ ಮುಂತಾದ ಯೋಜನೆಗಳು ನಮ್ಮ ಭಾಗಕ್ಕೆ ತರುವ ನಿಟ್ಟಿನಲ್ಲಿ ಸರಕಾರದ ಮುಂದೆ ಸಮರ್ಥವಾಗಿ ಹಕ್ಕು ಮಂಡಿಸಲು ಒತ್ತಾಯಿಸಿದರು.
ಸಂಸರದಾರ ಉಮೇಶ ಜಾಧವ ಅವರು ಮಾತನಾಡಿ ನಾನು ಲೋಕಸಭಾ ಸದಸ್ಯನಾಗಿ ಎರಡು ವರ್ಷಗಳು ಗತಿಸುತ್ತಿವೆ ಇನ್ನು ಮುಂದೆ ನಾನು ಸುಮ್ಮನೆ ಕೂಡುವವನಲ್ಲ ನಮ್ಮ ಭಾಗಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಂದ್ರದ ಮೇಲೆ ಬಲವಾದ ಒತ್ತಡ ತರುತ್ತೇನೆ ಅದರಂತೆ, ಸಮಿತಿಯು ಹಮ್ಮಿಕೊಂಡ ಅಭಿಯಾನಕ್ಕೆ ಸ್ಪಂದಿಸುತ್ತ ನಾನು ಯಾವುದೇ ಪ್ರತಿಷ್ಠೇಗೆ ಒಳಗಾಗದೆ ನಮ್ಮ ಭಾಗದ ಎಲ್ಲಾ ಸಂಸದರು ಒಗ್ಗಟ್ಟಾಗಿ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುತ್ತೇವೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ನಮ್ಮ ಭಾಗದ ಯೋಜನೆಗಳು ತರುವುದರ ಬಗ್ಗೆ ಸವಾಲಾಗಿ ಸ್ವೀಕರಿಸಿ ಬದ್ಧತೆ ಪ್ರದರ್ಶಿಸುತ್ತೇನೆಂದು ತಿಳಿಸಿದರು. ಅದರಂತೆ ಬರುವ ದಿನಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ತಾವು ಸೇರಿದಂತೆ ಕಲ್ಯಾಣ ಕರ್ನಾಟಕದ ಐದು ಜನ ಲೋಕಸಭಾ ಸದಸ್ಯರು ಸಂಸರು ಮತ್ತು ಶಾಸಕರು ಭಾಗವಹಿಸುವಂತೆ ಮನವರಿಕೆ ಮಾಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಗುರುರಾಜ ಭಂಡಾರಿ, ಹೇಮಂತ ರಾಠೋಡ, ಆಕಾಶ ರಾಠೋಡ, ಶ್ರೀಮಂತ ಪಾಟೀಲ್, ವೀರೇಶ ಪುರಾಣಿಕ್, ಗಿರಿಶ ಚಕ್ರಾ, ಮಹಮ್ಮದ ಇಸ್ಮಾಯಿಲ್, ನಿಂಗಣ್ಣ ಉದನೂರ, ಸಾಯಿಬಣ್ಣ, ಶೈಲೆಂದ್ರ ಕುಲಕರ್ಣಿ, ವಿಶ್ವಾಸ ಕಟಾರೆ ಸೇರಿದಂತೆ ಇತರರು ಇದ್ದರು.