ರೈಲ್ವೆ ವಿಭಾಗೀಯ ಕಚೇರಿ ರದ್ದು ಖಂಡಿಸಿ ಪ್ರತಿಭಟನೆ

ಕಲಬುರಗಿ,ಮಾ.25- ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಎಂದು ಕರೆಯುವ ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ
ರೈಲ್ವೆ ವಿಭಾಗೀಯ ಕೇಂದ್ರವನ್ನು ರದ್ದು ಪಡಿಸಿರುವುದನ್ನು ಖಂಡಿಸಿ ನಯಾ ಸವೇರಾ ಸಂಘಟನೆ ನೆತೃತ್ವದಲ್ಲಿಂದು ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ಇಲ್ಲಿ ಮಂಜೂರಾಗಿದ್ದ ರೈಲ್ವೆ ವಿಭಾಗವನ್ನು ರಾಜಕೀಯ ಹಗೆತನಕ್ಕಾಗಿ ರದ್ದುಪಡಿಸಲಗಿದೆ ಈ ಪ್ರದೇಶಕ್ಕೆ ಮಲತಾಯಿ ದೋರಣೆ ಅನುಸರಿಸಲಾಗುತ್ತಿದೆ, ರದ್ದು ಪಡಿಸಲಾದ ರೈಲ್ವೆ ವಿಭಾಗೀಯ ಕೇಂದ್ರವನ್ನು ಪುನಃ ಇಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು..
ರೈಲ್ವೆ ಇಲಾಖೆಯ ದಾಖಲೆಗಳ ಪ್ರಕಾರ ಆಂಧ್ರಪದೇಶ, ವಿಶಾಖಪಟ್ಟಣಂ ಮತ್ತು ಬೇರೆ ಯಾವುದೇ ಭಾಗದಲ್ಲಿ ರೈಲ್ವೆ
ವಿಭಾಗ ರಚನೆ ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ವರದಿ ನೀಡಿದೆ. ಆದರೂ ಈ ವಿಭಾಗ ರಚನೆ ಸರ್ಕಾರ
ಸುಮಾರು 170 ಕೋಟಿ ರೂಪಾಯಿ ನಿಗಧಿಪಡಿಸಿದೆ. ಇದು ಯಾವ ನ್ಯಾಯವೆಂದು ಪ್ರಶ್ನಿಸುವಂತಾಗಿದೆ.
ಕಲಬುರಗಿ ಲೋಕಸಭೆ ಸದಸ್ಯರಾದ ಡಾ.ಉಮೇಶ ಜಾಧವ ರವರ ಕಛೇರಿಯ ಮುಂದೆ ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಲಾಯಿತು.
ಮೊದಿನ ಪಟೇಲ ಅಗಲಿ, ಸಲೀಂ ಅಹ್ಮದ ಚಿತ್ತಾಪೂರಿ, ಶೇಖ ಯೂನ್ಯೂಸ್ ಅಲಿ, ಸಲಿಂ ಸಗರಿ, ಶೇಖ್ ಸಿರಾಜ್ ಪಾಶಾ, ಹೈದರಅಲಿ ಇನಾಮದಾರ, ಖಾಜಾ ಪಟೇಲ್ ಸರಡಗಿ, ಸಾಜೀದ ಅಲಿ ರಂಜೋಳವಿ, ರಾಖೀಯಾ ಶಿಕಾರಿ, ಸಾಹೇರಾಬಾನು, ಗೀತಾ ಮುದಗಲ್, ಅಹ್ಮದಿಬೇಗಂ, ಮಕ್ಕೂಲ್ ಅಹ್ಮದೆ ಸಗರಿ, ಅಬ್ದುಲ್ ಜಬ್ಬಾರ ಕಿಣಗಿ, ಶೇಖ ಮೋಯಿನ್, ಸಾಧಿಕ ಪಟೇಲ್ ಭಾಗವಹಿಸಿದ್ದರು.