ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಸನ್ಮಾನ

ಹುಬ್ಬಳ್ಳಿ,ಜ8: ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಅಜಯ್‍ಕುಮಾರ್ ಸಿಂಗ್ ರವರಿಗೆ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ವೇದಿಕೆಯ ಪದಾಧಿಕಾರಿಗಳು ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳು ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದು ಅನುಷ್ಠಾನಕ್ಕೆ ಮುಂದಾಗಬೇಕು ಅಲ್ಲದೆ, ದಶಕಗಳಿಂದ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಪೂರ್ಣಗೊಂಡು ಕಾರ್ಯರೂಪಕ್ಕೆ ಬಾರದೇ ಇರುವದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುಂಠಿತಗೊಂಡಿದೆ.
ಆದಕಾರಣ ಕೂಡಲೇ ಇದರ ನಿವಾರಣೆಗೆ ತಾವುಗಳು ಮುಂದಾಗಬೇಕೆಂದು ಮನವಿ ಮೂಲಕ ಒತ್ತಾಯಿಸಲಾಯಿತು.
ನೈರುತ್ಯ ರೈಲ್ವೆ ವಲಯಕ್ಕಾಗಿ ಅಂದು ಡಾಕ್ಟರ್ ಪಾಟೀಲ್ ಪುಟ್ಟಪ್ಪನವರ ನೇತೃತ್ವದಲ್ಲಿ ಐತಿಹಾಸಿಕ 18 ಗಂಟೆಗಳ ಕಾಲ ರೈಲ್ವೆ ರೋಕೋ ಮಾಡುವ ಮೂಲಕ ಹುಬ್ಬಳ್ಳಿಗೆ ವಲಯ ಕಚೇರಿಯನ್ನು ಪಡೆದಿದ್ದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತಲ್ಲದೇ ಇಲ್ಲಿಯವರೆಗೆ ತಾವುಗಳು ಕೈಗೊಂಡ ಕೆಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಅಭಿವೃದ್ಧಿ ಹೋರಾಟ ವೇದಿಕೆಯ ಕುತ್ಬುದ್ದೀನ್ ಖಾಜಿ. ಬಾಬಾಜಾನ್ ಮುಧೋಳ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ವೇದಿಕೆಯ ರಾಜಶೇಖರ್ ಮೆಣಸಿನಕಾಯಿ ಹಾಗೂ ಮುಖಂಡರಾದ ಬಂಗಾರೇಶ್ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.