ರೈಲ್ವೆ ನಿಲ್ದಾಣ : ವಿಲ್‌ಚೇರ್ ದೇಣಿಗೆ

ರಾಯಚೂರು.ಜು.೨೪- ರೋಟರಿ ಕ್ಲಬ್ ರಾಯಚೂರು ಮತ್ತು ರೋಟರಿ ಸೆಂಟ್ರಲ್ ಸಂಯುಕ್ತ ಆಶ್ರಯದಲ್ಲಿ ರೈಲು ನಿಲ್ದಾಣಕ್ಕೆ ಬರುವ ಅಂಗವಿಕಲರಿಗೆ ವೃದ್ಧರಿಗೆ ಸಹಾಯ ಆಗಲು ವಿಲ್ ಚೇರ್ ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿದ ಶ್ರಿ ಮಾಣಿಕ್ ಪವರ್ ಮುಂಬರುವ ಗೌರ್ನರವರು ಮಾತನಾಡಿ ರೋಟರಿ ಸಂಸ್ಥೆಯು ಹಲವಾರು ಸಮಾಜಿಕ ಕಾರ್ಯಕ್ರಮಗಳು ಮಾಡುತ್ತಿದ್ದು ಸಂಕಷ್ಟದಲ್ಲಿರುವ ಜನತೆ ಸ್ಪಂದಿಸುವ ಕೆಲಸ ಮಾಡುತ್ತದೆ ಅಂದರವಾಗಿ ಇಂದು ವಿಲ್ ಚೇರ್ ನೀಡಲಾಗುತ್ತದೆ ಎಂದರು.
ಎನ್. ಶಿವಶಂಕರ ವಕೀಲರು ಕಾರ್ಯದರ್ಶಿಯ ಮಾತನಾಡಿ ಸಮಾಜಿಕ ಜಾಲತಾಣದಲ್ಲಿ ವೃದ್ಧ ಪ್ರಯಾಣಿಕರ ಎರಡನೆಯ ಪ್ಲಾಟ್ ಫಾರ್ ಹೋಗಲು ತುಂಬ ತೊಂದರೆಯಾದ ಬಗ್ಗೆ ತಿಳಿಸಿದ್ದರು ಅದಕ್ಕೆ ಮುಂದೆ ಎಲ್ಲ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಲ್ ಚೇರ್ ದೇಣಿಗೆ ನೀಡುತ್ತಿದ್ದವೆ ಎಂದರು.
ಕೇಶವರೆಡ್ಡಿ ಅಧ್ಯಕ್ಷರು ಮಾತನಾಡಿ ವಿಲ್ ಚೇರ್ ಯನ್ನು ರೈಲ್ವೆಯ ಸಿಂಬ್ಬದಿಗಳು ಸರಿಯಾಗಿ ಸದುಪಯೋಗ ಮಾಡಿಕೊಳ್ಳುಬೇಕು ವಿಲ್ ಚೇರ್ ನಿಜವಾದ ವೃದ್ಧರಿಗೆ ಅಂಗವಿಕಲರ ಮಾತ್ರ ಉಪಯೋಗಿಸಬೇಕು ಎಂದರು. ಬಾಬುರಾವ್ ಸದಸ್ಯರು ರೈಲ್ವೆಯ ಸಲಹೆ ಸಮಿತಿ ಇವರು ಮಾತನಾಡಿ ರೋಟರಿ ಸಂಸ್ಥೆಯ ಎನ್ ಶಿವಶಂಕರ ವಕೀಲರು ಮಂಜುನಾಥ ಹಾನಗಲ್ ವಿಲ್ ಚೇರ್ ದೇಣಿಗೆ ನೀಡಿದ್ದಕ್ಕೆ ಚಿರಋಣಿಯಾಗಿದ್ದವೆ ಎಂದರು.
ಈ ಸಂದರ್ಭದಲ್ಲಿ ಅಸ್ವಿಂಟೆ ಗೌರ್ನರ ಯಶವಂತ ರೋಟರಿ ಸೆಂಟ್ರಲ್ ಅಧ್ಯಕ್ಷರಾದ ಪ್ರಮೋದ್, ಸದಸ್ಯರಾದ ನಿಜಾನಂದ ರೆಡ್ಡಿ ,ವಿಜಯಕುಮಾರ ಸಜ್ಜನ, ಶಂಕರಸಿಂಗ್, ಅಮಿತ್, ವಿರುಪಾಕ್ಷಿಗೌಡ ಮಂಜುನಾಥ ಹಾನಗಲ್ಲ, ಸ್ಟೇಶನ್ ಮಾಸ್ಟರ್ ಸರ್ಕಾರ ಸಿಬ್ಬಂದಿಗಳು ಉಪಸಿತದ್ದರು.