ರೈಲ್ವೆ ನಿಲ್ದಾಣದ ಲಿಫ್ಟ್ ಕಾಮಗಾರಿ ಪೂರ್ಣ : ಶೀಘ್ರ ಸಂಸದರಿಂದ ಉದ್ಘಾಟನೆ

ರಾಯಚೂರು.ನ.೧೩- ನಗರದ ರೈಲು ನಿಲ್ದಾಣದಲ್ಲಿ ಸುಮಾರು ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದ ಲಿಫ್ಟ್ ಅಳವಡಿಕೆ ಕಾಮಗಾರಿಯನ್ನು ಸಂಸದರಾದ ರಾಜಾ ಅಮರೇಶ್ವರ ನಾಯಕ್ ರವರು ನವದೆಹಲಿಯಲ್ಲಿ ಖುದ್ದಾಗಿ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಬೋರ್ಡ್ ಸದಸ್ಯರಾದ ಬಾಬು ರಾವ್ ರವರು ಸಹ ಸಿಕಂದರಾಬಾದ್ ರೈಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಒತ್ತಾಯಿಸಿದ್ದರು.
ಇದಕ್ಕೆ ಸ್ಪಂದಿಸಿದ ಅವರು, ಬಹು ದಿನಗಳಿಂದ ಬೇಡಿಕೆ ಇದ್ದ ರಾಯಚೂರು ಲಿಫ್ಟ್ ಕಾಮಗಾರಿಯು ಸಾರ್ವಜನಿಕರಿಗೆ ಉಪಯೋಗಕ್ಕೆ ದೊರೆಯಲಿದೆ ಎಂದು ಭರವಸೆ ನೀಡಿದ್ದರು. ಇಂದು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ಶೀಘ್ರವಾಗಿ ಸಂಸದರಿಂದ ಉದ್ಘಾಟನೆಗೊಳ್ಳಲಿದೆ. ರಾಯಚೂರು ರೈಲ್ವೆ ನಿಲ್ದಾಣದಿಂದ ಯರಮರಸ್ ಗೆ ಗೂಡ್ಸ್ ಶೆಡ್ ಸ್ಥಳಾಂತರ ಕಾಮಗಾರಿಯ ಎಸ್ಟಿಮೇಟ್ ಗುಂತಕಲ್ ರೈಲ್ವೆ ಡಿಆರ್ ಎಂ ರಿಂದ ಕೇಂದ್ರ ರೈಲ್ವೆ ಬೋರ್ಡ್ ಗೆ ಸಲ್ಲಿಕೆಯಾಗಿದ್ದು, ಶೀಘ್ರವಾಗಿ ಅನುಮೋದನೆ ಸಿಗಲಿದೆಂದರು. ಯಾದಗಿರಿ ರೈಲ್ವೇ ಗೂಡ್ಸ್ ಶೆಡ್ ಕಾಮಗಾರಿಗೆ ಅಂದಾಜು ಪತ್ರಿಕೆ ಸಲ್ಲಿಕೆಯಾಗಿದ್ದು, ಅದು ಸಹ ಅನುಮೋದನೆಯ ನಂತರ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಳ್ಳಲಾಗುತ್ತದೆ ಎಂದು ಬಾಬುರಾವ್ ಅವರು ತಿಳಿಸಿದ್ದಾರೆ.