ರೈಲ್ವೆ ನಿಲ್ದಾಣದಲ್ಲಿ ನೇಣಿಗೆ ಶರಣಾದ ವ್ಯಕ್ತಿ

ದಾವಣಗೆರೆ.ಏ.೨೬; ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿರುವ ಘಟನೆ ಹರಿಹರದ ರೈಲ್ವೆ ಸ್ಟೇಷನ್‌ ಆವರಣದಲ್ಲಿ ಜರುಗಿದೆ.ವ್ಯಕ್ತಿಯ ಗುರುತುಪತ್ತೆಯಾಗಿಲ್ಲ.ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು ಮೃತನ ಮಾಹಿತಿಯನ್ನು  ರೈಲ್ವೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ.ನಿನ್ನೆಯಿಂದಲೂ ಹರಿಹರ ರೈಲ್ವೆ ನಿಲ್ದಾಣದಲ್ಲಿ ಈತ ತಿರುಗಾಡುತ್ತದ್ದು ಸ್ಥಳೀಯ ಅಂಗಡಿಯವರು ಊಟ ನೀಡಿದ್ದಾರೆ.ರಾತ್ರಿಯೇ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ಪರಿಶೀಲನೆ ಕೈಗೊಂಡಿದ್ದಾರೆ.