ರೈಲ್ವೆ ಚಾಲಕರ ವಸತಿ ಗೃಹದಲ್ಲಿ ಹಾವು ಪತ್ತೆ

ಹೊಸಪೇಟೆ, ಅ.28- ಹೊಸಪೇಟೆಯ ನೈರುತ್ಯ ರೈಲ್ವೆ ಚಾಲಕರ ವಸತಿ ಗೃಹದಲ್ಲಿ ಮಂಗಳವಾರ ರಾತ್ರಿ ಹಾವು ಕಾಣಿಸಿದ್ದು, ಉರಗ ತಜ್ಞ ಅಮೀತ್ ತಾಪ್ಸೆ ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಸಾಗಿಸಿದ್ದಾರೆ.
ರೈಲ್ವೆ ಚಾಲಕರ ವಸತಿ ಗೃಹದಲ್ಲಿ ಪತ್ತೆಯಾದ ಕೂಡಲೆ ಉರಗತಜ್ಞ ಅಮೀತ್ ತಾಪ್ಸೆ ಅವರಿಗೆ ಮಹಿತಿ ನೀಡಿದ ಬಳಿಕ ಆಗಮಿಸಿ ಹಾವನ್ನು ರಕ್ಷಿಸಿ ಅದನ್ನು ಅರಣ್ಯ ವಲಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಇದು ಟಿಂಕೆಟ್ ಸ್ನೇಕ್ ಎಂಬ ಹೆಸರಿನ ವಿಷಕಾರಿಯಲ್ಲದ ಹಾವಾಗಿದೆ. ಬಹುತೇಕರು ಇದನ್ನು ಉರುಪೆಂಜರಿ ಹಾವೆಂದು ಭಾವಿಸಿ ಕೊಲ್ಲುತ್ತಾರೆ. ಹಾವುಗಳ ಸರಿಯಾದ ಮಾಹಿತಿ ಇಲ್ಲದೇ ಅದನ್ನು ಕೊಲ್ಲಬಾರದು. ಇದು ರೈತಮಿತ್ರ ಹಾವಾಗಿದ್ದು ಯಾರ ಜೀವಕ್ಕೂ ಅಪಾಯವಿಲ್ಲ ಈ ಹಾವುಗಳು ಇಲಿ ಮತ್ತು ಗೋಸುಂಬೆಗಳನ್ನು ಹೆಚ್ಚಾಗಿ ಸೇವಿಸುತ್ತವೆ. ಇತ್ತೀಚಿಗೆ ಟ್ರಿಂಕೆಟ್ ಸಂತತಿ ಕಡಿಮೆಯಾಗಿದ್ದು ಸದ್ಯ ಅಳಿವಿನಂಚಿನಲ್ಲಿವೆ, ಲಭ್ಯವಿರುವ ಹಾವುಗಳನ್ನು ರಕ್ಷಿಸಬೇಕಿದೆ ಎಂಬುದು ಉರಗತಜ್ಞ ಅಮೀತ್ ತಾಪ್ಸೆ(9739862689) ಅಭಿಪ್ರಾಯ.