ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ರಾಯಚೂರು.ಸೆ.16- ರೈಲ್ವೆ ಖಾಸಗೀಕರಣ ವಿರೋಧಿಸಿ ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ರೈಲ್ವೆ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸುತ್ತಾ ಭಾರತೀಯ ರೈಲ್ವೆ ದೇಶಾದ್ಯಂತ ತನ್ನದೇಯಾದ ಸ್ವಯಂ ಪೂರ್ಣವಾದ ಮೂಲ ಸೌಕರ್ಯವನ್ನು ಹೊಂದಿದೆ ಸಾರ್ವಜನಿಕ ಹಣಕಾಸಿನ ನೆರವಿನಿಂದ ಬೆಳೆದ ರೈಲ್ವೆ ಇಲಾಖೆ ಅತಿದೊಡ್ಡ ಸಾರಿಗೆ ಜಾಲವಾಗಿದೆ. ಇಂದು ದೇಶಾದ್ಯಂತ 20 ದಶಲಕ್ಷಕ್ಕೂ ಹೆಚ್ಚು ಜನರ ಜೀವನಡಿಯಾಗಿದೆ. ವಿಶ್ವದಲ್ಲಿ ದೇಶವು 7ನೇ ದೊಡ್ಡ ರೈಲ್ವೆ ಸಂಚಾರವಾಗಿದೆ. ದೇಶದಲ್ಲಿ 109 ಮಾರ್ಗಗಳಲ್ಲಿ 151 ರೈಲ್ವೆ ಖಾಸಗೀಕರಣಗೊಳಿಸಲಾಗಿದೆ. ಕರ್ನಾಟಕದಲ್ಲಿ 14 ರೈಲ್ವೆಗಳನ್ನು ಸಂಭವ್ಯ ಮಾರ್ಗವನ್ನು ಖಾಸಗೀಕರಣಗೊಳಿಸಲಾಗಿದೆ. ಬಹುತೇಕ ವಲಸೆ ಕಾರ್ಮಿಕರು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಉದ್ಯೋಗ ಹುಡುಕಲು ಪ್ರಯಾಣ ಮಾಡುತ್ತಿದ್ದಾರೆ.ಆದರಿಂದ ಇವರಿಗೆ ರೈರ್ವೆ ಖಾಸಗೀಕರಣ ಹೋರಾಟವು ಕಾರ್ಮಿಕರ ಸಂಘರ್ಷ ಮತ್ತು ತ್ಯಾಗದಿಂದ ಕಷ್ಟಪಟ್ಟು ರೈಲ್ವೆ ಕಾರ್ಮಿಕರು ಉದ್ಯೋಗ ನೇಮಕಾತಿ, ಉಚಿತ ಪಾಸ್ ಮುಂತಾದ ಎಲ್ಲಾ ಹಕ್ಕುಗಳು ದೊಡ್ಡ ಅಪಾಯದಲ್ಲಿವೆ. ಇವೆಲ್ಲಾವು ಭಾರತೀಯ ಆರ್ಥಿಕತೆ ದೇಶದ ಜನ ಸಾಮಾನ್ಯರ ಮತ್ತು ರೈಲ್ವೆ ಕಾರ್ಮಿಕರ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಆದರಿಂದ ಇದನ್ನು ನಮ್ಮ ಪಕ್ಷವು ತೀವ್ರ ವಿರೋಧಿಸುತ್ತಿದೆ. ಕೂಡಲೇ ರೈಲ್ವೆ ಖಾಸಗೀಕರಣ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ಮಲ್ಲನಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.