ರೈಲ್ವೆ ಅಭಿವೃದ್ಧಿ ಯೋಜನೆಗಳ ಶಿಫಾರಸ್ಸಿಗೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.17: ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಇಂದು ಕೊಪ್ಪಳ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣನವರನ್ನು
 ನವದೆಹಲಿಯ ಸೌತ್ ಅವಿನ್ಯು ರಸ್ತೆಯ ಅವರ ನಿವಾಸದಲ್ಲಿ ಭೇಟಿಯಾಗಿ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿ ಪ್ರಧಾನ ಮಂತ್ರಿಗಳು ಹಾಗೂ ರೈಲ್ವೆ ಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ  ಮನವಿ ಅರ್ಪಿಸಲಾಯಿತು
ಚರ್ಚೆಯ ಸಮಯದಲ್ಲಿ ಪ್ರಧಾನವಾಗಿ ಹಿರಿಯ ನಾಗರಿಕರಿಗೆ ರೈಲ್ವೆ ಗಳಲ್ಲಿ ರಿಯಾಯಿತಿ ಸೌಲಭ್ಯ ನೀಡುವ ಬಗ್ಗೆ ಹಾಗೂ ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂರ್ ನೂತನ ಬ್ರಾಡಗೇಜ್  ಕಾಮಗಾರಿಯನ್ನು ಆರಂಭಿಸುವಂತೆ ಒತ್ತಾಯಿಸಲಾಯಿತು
ಬೆಳಗಾಂ ಸಿಕಂದ್ರಾಬಾದ್  ಎಕ್ಸ್ಪ್ರೆಸ್ ರೈಲನ್ನು ಕಾಯಂಗೊಳಿಸಿ ಈ ರೈಲನ್ನು ಕೊಲ್ಲಾಪುರದಿಂದ ಆರಂಭಿಸಿ ಮುನಗೂರು ವರೆಗೆ ವಿಸ್ತರಿಸುವಂತೆ ಕ್ರಮ ಕೈಗೊಳ್ಳಲು ಕೋರಲಾಯಿತು.  ಬಹುದಿನಗಳ ಬೇಡಿಕೆಯಾದ ಮೈಸೂರು ಬಿಜಾಪುರ ಎಕ್ಸ್ಪ್ರೆಸ್ ರೈಲು ಅರಸಿಕೆರೆ ಚಿತ್ರದುರ್ಗ ಬಳ್ಳಾರಿ  ಕೊಪ್ಪಳ ಗದಗ್ ಮಾರ್ಗದಲ್ಲಿ ಆರಂಭಿಸುವಂತೆ ಒತ್ತಾಯಿಸಲಾಯಿತು.
ಇದಕ್ಕೆ ಸಂಬಂಧಿಸಿದಂತೆ ಮುಂಬೈ ಗದಗ್ ರೈಲನ್ನು ಮೈಸೂರುವರೆಗೆ ಇದೇ ಮಾರ್ಗದಲ್ಲಿ ವಿಸ್ತರಿಸುವಂತೆ ಕೊರಲಾಯಿತು
ಕೊಪ್ಪಳ ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಎಲ್ಲಾ ವಿಶೇಷ ರೈಲುಗಳನ್ನು ಕಾಯಂ  ರೈಲುಗಳಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲು  ರೈಲ್ವೆ ಇಲಾಖೆಗೆ ಪತ್ರ ಬರೆಯಬೇಕಾಗಿ ಕೋರಲಾಯಿತು
ಲೋಕಸಭಾ ಸದಸ್ಯರನ್ನು ಭೇಟಿಯಾದ ನಿಯೋಗದಲ್ಲಿ ಸಮಿತಿಯ ಅಧ್ಯಕ್ಷ ಕೆ ಯಂ ಮಹೇಶ್ವರ್ ಸ್ವಾಮಿ ಹಾಗೂ  ಕಾರ್ಯಕಾರಿ ಸಮಿತಿ ಸದಸ್ಯ ಪಿ ಬಂಡೆಗೌಡ ಉಪಸ್ಥಿತರಿದ್ದರು