ರೈಲ್ವೆ ಅಪಘಾತದಲ್ಲಿ ಕಾಲನ್ನು ಕಳೆದಕೊಂಡಿರುವ ಕುಟುಂಬಕ್ಕೆ ಸಹಾಯಧನ

ಅರಕೇರಾ.ಸೆ.೧೩- ದೇವದುರ್ಗ ತಾಲ್ಲೂಕಿನ ಹೇಮನೂರು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ೮ನೇತರಗತಿಯಲ್ಲಿ ಅಭ್ಯಾಸಮಾಡುತ್ತಿರುವ ಕುಮಾರಿ ಶ್ರೀದೇವಿ ತಂದೆ ಹನುಮಂತ್ರಾಯ ಇತ್ತೀಚಿಗೆ ರೈಲ್ವೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದು ಮತ್ತೊಂದು ಕಾಲಿಗೆ ತೀವ್ರತರವಾದ ಗಾಯವಾಗಿದೆ ಅವರ ಕುಟುಂಬವು ಬಡತನದಲ್ಲಿ ಇರುವದರಿಂದ ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸಲು ಕುಟುಂಬವರ್ಗದವರಿಗೆ ಕಷ್ಟವಾಗುತ್ತಿದೆ.
ಇದನ್ನು ಅರಿತಕೊಂಡಿರುವ ಈ ವಿದ್ಯಾರ್ಥಿ ಕಷ್ಟಕ್ಕೆ ಕೈಲಾದ ಸಹಾಯವನ್ನು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ತಾನು ಅಭ್ಯಾಸಮಾಡುತ್ತಿರುವ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದಯ್ಯರು ಎಲ್ಲಾ ಶಿಕ್ಷಕವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳುಸೇರಿಕೊಂಡು ಆವಿದ್ಯಾರ್ಥಿಯ ಚಿಕಿತ್ಸೆಯ ಸಲುವಾಗಿ ಧನ ಸಹಾಯಮಾಡಲು ನಿರ್ಧರಿಸಿ ಸುಮಾರು ೨೨೦೦೦ ಸಾವಿರ ರೂಪಾಯಿಗಳು ಸಂಗ್ರಹಿಸಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ರವೀಂದ್ರನಾಥ ಹಿರೇಮಠ,ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ವಿದ್ಯಾವತಿ ಹಾಗೂ ಶಿಕ್ಷಕರಾದ ಬಸವರಾಜ,ದೇವಮ್ಮ,ಪಂಪದೇವ,ರಾಜಾವಲಿ,ಬಸಲಿಂಗಪ್ಪ, ಮಹಾದೇವ,ಕಾಂತಗೌಡ,ಮುತ್ತಪ್ಪ,ಸುರೇಶ,ಚಿತ್ತಾವಲಿ ಪ್ರಾಣೇಶ ಸಿ ಆರ್ ಪಿ ರಘು,ಶೈಲಾಸಜ್ಜನ ಸೇರಿದಂತೆ ಎಲ್ಲರೂ ಕೂಡಿಕೊಂಡು ಮನೆಗೆ ಬೇಟಿ ನೀಡಿವಿದ್ಯಾರ್ಥಿಯ ಆರೋಗ್ಯದ ಬಗ್ಗೆ ವಿಚಾರಿಸಿವಿದ್ಯಾರ್ಥಿಗೆ ದೈರ್ಯ ತುಂಬಿದರು ಕುಟುಂಬಸ್ಥರಿಗೆ ಧನಸಹಾಯವನ್ನು ನೀಡಿದರು.ಮನವಿಯತೆ ಮೇರೆದ ಎಲ್ಲಾ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಕುಟುಂಬಸ್ಥರ ಪರವಾಗಿ ಗ್ರಾಮದಲ್ಲಿನ ಶಿಕ್ಷಣ ಪ್ರೇಮಿಗಳು ಕೃತ್ಞತೆಗಳನ್ನು ಸಲ್ಲಿಸಿದ್ದಾರೆ.