ರೈಲ್ವೆಗೆ ಸಂಬಂಧಿಸಿದ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಕಲಬುರಗಿ:ನ.27: ರೈಲ್ವೆಗೆ ಸಂಬಂಧಿಸಿದ ಕಲಬುರಗಿ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವಂತೆ ರೈಲ್ವೆ ಸಚಿವರು ಹಾಗೂ ಮಧ್ಯರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಕಲಬುರಗಿಯ ರೈಲ್ವೆ ನಿಲ್ದಾಣದ ಪ್ರಬಂಧಕರ ಮೂಲಕ ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕಲಬುರಗಿ ರೈಲ್ವೆ ವಿಭಾಗದ ಸ್ಥಾಪನೆ, ಕಲಬುರಗಿಯಿಂದ ಕೆ.ಎಸ್.ಆರ್ ಬೆಂಗಳೂರಿಗೆ ಸೂಪರ್ ಫಾಸ್ಟರೈಲನ್ನು ಆರಂಭಿಸಬೇಕು, ಕಲಬುರಗಿಯಿಂದ ಮಂಗಳೂರಿಗೆ ಸೂಪರ್ ಫಾಸ್ಟರೈಲನ್ನು ಆರಂಭಿಸಬೇಕು (ವಾಯ ಬಳ್ಳಾರಿ, ಅರಸಿಕೆರೆ), ಕಲಬುರಗಿಯಿಂದ ವಾಸ್ಕೋ ಸುಪ್ಪರ್ ಫಾಸ್ಟ ರೈಲನ್ನು ಆರಂಭಿಸುಬೇಕು (ರಾಯಚೂರ, ಗುಂತಕಲ್, ಬಳ್ಳಾರಿ, ಹುಬ್ಬಳಿ), ಅಹಮದಾಬಾದ ಚನೈ ಎಕ್ಸಪ್ರೇಸ್‍ರೈಲನ್ನು ಕಲಬುರಗಿಯಲ್ಲಿ ನಿಲ್ಲುಗಡೆ ಮಾಡಬೇಕು (09053/4), ಚನೈ ಕೆವಾಡಿಯ ಎಕ್ಸಪ್ರೇಸ್ ರೈಲನ್ನು ಕಲಬುರಗಿಯಲ್ಲಿ ನಿಲ್ಲುಗಡೆ ಮಾಡಬೇಕು (09119/20), ಕೊಲ್ಲಾಪೂರ ಸೊಲಾಪೂರ ರೈಲನ್ನು ಕಲಬುರಗಿ ವರೆಗೂ ವಿಸ್ತರ್ಣೆ ಮಾಡಬೇಕು (22133/4), ಮೀರಜ ಸೋಲಾಪೂರ ರೈಲನ್ನು ಕಲಬುರಗಿಯ ವರೆಗೆ ವಿಸ್ತರ್ಣೆ ಮಾಡಬೇಕು (22155/6), ಸಿಕ್ಕಿಂದ್ರಾಬಾದ ಚಿತ್ತಾಪೂರ ಪ್ಯಾಸೆಂಜರ್ ರೈಲನ್ನು ಕಲಬುರಗಿ ವರೆಗೆ ವಿಸ್ತರ್ಣೆ ಮಾಡಬೇಕು (07759/60), ಕಲಬುರಗಿರೈಲು ನಿಲ್ದಾಣದಲ್ಲಿ 2ನೇ ಪೀಟಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ಕೈಗಾರಿಕಾ ಪಟ್ಟಣವಾದ ಶಹಾಬಾದನಲ್ಲಿ ಎಲ್ಲಾಎಕ್ಸಪ್ರೇಸ್ ರೈಲುಗಳನ್ನು ನಿಲ್ಲುಗಡೆ ಮಾಡಬೇಕು, ಕಲಬುರಗಿರೈಲು ನಿಲ್ದಾಣದಲ್ಲಿನ ಪಾರ್ಕಿಂಗ್‍ದರವನ್ನು ಕಡಿಮೆ ಮಾಡಬೇಕು (ಒಂದು ದಿನಕ್ಕೆ ರೂ 80-100 ವರೆಗೆ ಸಧ್ಯದದರವಿದೆ), ಎಂದು ವಿವಿಧ ಬೇಡಿಕೆಗಳನ್ನು ಸ್ಪಂದಿಸಬೇಕೆಂದು ಮನವಿ ಮಾಡಿದರು.
ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣಎಸ್ ನಡಗೇರಿ, ಜಿಲ್ಲಾಅಧ್ಯಕ್ಷ ಬಾಬು ಮದನಕರ್, ಉಪಾಧ್ಯಕ್ಷ ಅನೀಲ ಕಪನೂರ, ನಗರಾಧ್ಯಕ್ಷ ಗೌತಮ್‍ಕರಿಕಲ, ಸಂಘಟಕರಾದ ಉದಯಕುಮಾರಖಣಗೆ, ಸಾಗರ ಪಾಟೀಲ್, ಮಹೇಶ ಪಾಟೀಲ್, ಸೂರ್ಯಪ್ರಕಾಶ ಚಾಳಿ, ನಾಗು ಡೊಂಗರಗಾಂವ, ಸಿದ್ದಲಿಂಗ ಉಪ್ಪಾರ, ಕುಶಾಲ ಕಪನೂರ, ಪಿಂಟು ಬೋದ್ದನ್ ಇದ್ದರು.