ರೈಲು ಹಳಿಗೆ ತಲೆಕೊಟ್ಟು ಪೊಲೀಸ್ ಕಾನ್ಸಸ್ಟೇಬಲ್ ಆತ್ಮಹತ್ಯೆ

ಕಲಬುರಗಿ,ನ.27-ರೈಲು ಹಳಿಗೆ ತಲೆಕೊಟ್ಟು ಪೊಲೀಸ್ ಕಾನ್ಸಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾವಳಗಿ ರೈಲ್ವೆ ಸ್ಟೇಷನ್ ಹತ್ತಿರ ಇಂದು ಬೆಳಿಗ್ಗೆ 5.30ಕ್ಕೆ ನಡೆದಿದೆ
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಅಫಜಲಪುರ ತಾಲ್ಲೂಕಿನ ಮದರಾ (ಕೆ) ಗ್ರಾಮದ ಶ್ರೀನಾಥ ಈರಣ್ಣ ಮೂಲಗೆ (28) ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ, ಮುಂದಿನ ತಿಂಗಳು ಅಂದರೆ ಡಿಸೆಂಬರ್ 1 ರಂದು ಇವರ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.