ರೈಲು ಹರಿದು 96 ಕುರಿಗಳ ಸಾವಿಗೆ ಪರಿಹಾರ ನೀಡಲು ಅಗ್ರಹಿಸಿ ಮನವಿ

ವಿಜಯಪುರ, ಜು.19-ಕೂಡಗಿ ರೇಲ್ವೆ ನಿಲ್ದಾಣದ ಹತ್ತಿರ ಯಶವಂತಪೂರ ಎಕ್ಸಪ್ರೇಸ್ಸ ರೈಲು ಹರಿದು ದಿನಾಂಕ 16-07-22ರಂದು ಸಂಜೆ 96ಕುರಿಗಳ ದಾರುಣ ಸಾವಿಗೆ ಕುರಿಗಾರರ ನಾಲ್ಕು ಕುಟುಂಬ ತತ್ತರಿಸಿ ಹೋದ ಕಾರಣ ಇಂದು ಜಿಲ್ಲಾ ಕುರಿಗಾರರ ಸಂಘÀ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರ ಪಧಾಧಿಕಾರಿಗಳಿಂದ ವಿಜಯಪೂರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಬಡ ಕುರಿಗಾರ ಮೂಲ ವೃತ್ತಿ ಕುರಿಗಾರಿಕೆ ಅಗಿದ್ದು ತಮ್ಮ ಕುರಿಗಳ ಸಾವಿನಿಂದ ಶೇಖಪ್ಪ ಮೂಕನವರ, ಕಲ್ಲಪ್ಪ ಮೂಕನವg,À ಚಂದೆಪ್ಪ ಕರಿಗಾರ ಮತ್ತು ಮಲ್ಲಪ ಕಾಡಸಿದ್ಧ ಎಂಬುವವರು ಮುಂದೆ ಎನು ಮಾಡಬೇಕು ಎಂಬ ಚಿಂತೆಯಿಂದ ಇಡಿ ಕುಟುಂಬ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದು ಪರಿಹಾರ ಸಿಗುವತನಕ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ಆದ್ದರಿಂದ ಆದಷ್ಟು ಬೇಗನೆ ಹೆಚ್ಚಿನ ಪರಿಹಾರ ನೀಡಬೇಕೆಂದು ಅವರಿಗೆ ಮನವಿ ಮಾಡಿತು.
ಈ ಸಂದರ್ಭದಲ್ಲಿ ಕುಟುಂಬಗಳಿಗೆ ಜಿಲ್ಲಾ ಕುರಿಗಾರ ಸಂಘದ ಪದಾಧಿಕಾರಿಗಳು ಧ್ಯರ್ಯದಿಂದ ಇರಲು ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ಸ ಮುಖಂಡ ಸೋಮನಾಥ ಕಳ್ಳಿಮನಿ, ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾದ ದೇವಕಾಂತ ಬಿಜ್ಜರಗಿ, ಜಿಲ್ಲಾ ಕುರಿಗಾರ ಸಂಘದ ಅಧ್ಯಕ್ಷರಾದ ಬೀರಪ್ಪ ಜುಮನಾಳ, ಪ್ರಧೇಶ ಕುರುಬರ ಸಂಘದÀ ನಿರ್ದೇಶಕಿ ರಾಜೇಶ್ವರಿ ಯರನಾಳ, ಬ.ಬಾಗೆಡಾಡಿ ತಾಲೂಕ ಕುರುಬರ ಸಂಘದ ಅಧ್ಯಕ್ಷರಾದ ರಾಜು ಯರನಾಳ, ಬಸವರಾಜ ಕಂಕಣವಾಡಿ, ಮತ್ತು ತಳೆವಾಡ ಗ್ರಾಮದ ಕುರಿಗಾರರು ಉಪಸ್ಥಿತರಿದ್ದರು.