ರೈಲು ಸಂಚಾರ ಮುನ್ನಚ್ಚರಿಕೆ ಕಡ್ಡಾಯ

ನವದೆಹಲಿ, ಏ. ೨೦: ದೇಶಾದ್ಯಂತ ಕೋವಿಡ್-೧೯ ಪ್ರಕರಣಗಳು ಶರವೇಗದಲ್ಲಿ ಏರುತ್ತಿದ್ದು, ಈ ನಡುವೆಯೂ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಬಾಧಕವಿಲ್ಲ, ಸಾಮಾನ್ಯವಾಗಿ ಎಲ್ಲೆಡೆ ಚಲಿಸಲಿವೆ ಎಂದು ರೈಲ್ವೆ ಸಚಿವಾಲಯದ ಸ್ಪಷ್ಟಪಡಿಸಿದೆ.
ಪ್ರಯಾಣಿಕರ ರೈಲು ಸ್ಥಗಿತಗೊಳಿಸಲಾಗುತ್ತದೆಂಬ ಆತಂಕ ಯಾರಿಗೂ ಬೇಡ. ರೈಲು ಸಂಚಾರವನ್ನು ಕಾರಣವಿಲ್ಲದೆ ನಿಲ್ಲಿಸುವುದಿಲ್ಲ ಎಂದು ರೈಲ್ವೆ ಸಚಿವಾಲಯ ತನ್ನ ಟ್ವಿಟರ್ ನಲ್ಲಿ ತಿಳಿಸಿದೆ. ಜನರು ಎಂದಿನಂತೆ ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಬಹುದು ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದೆ.
ರೈಲುಗಳಲ್ಲಿ ಪ್ರಯಾಣ ಬೆಳೆಸುವವರು ಯಾವುದೇ ಕಾರಣಕ್ಕೂ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಅನುಸರಿಸಬೇಕು. ಮುಖ್ಯವಾಗಿ ರೈಲ್ವೆ ಸಚಿವಾಲಯವು ಪ್ರಯಾಣಿಕರಿಗೆ ಆರ್ ಎಸಿ-ಟಿಕೆಟ್ ಗಳನ್ನು ದೃಢೀಕರಿಸಿದ್ದರೆ ಮಾತ್ರ ರೈಲ್ವೆ ನಿಲ್ದಾಣಗಳಿಗೆ ಬರಬೇಕೆಂದು ಮನವಿ ಮಾಡಿದೆ.