ರೈಲು ಬೋಗಿಯಾಗಿ ಬದಲಾದ ಗಜಾಪುರ ಶಾಲೆ

ಕೊಟ್ಟೂರು ಮಾ31: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಪ್ರಯತ್ನಗಳು ನಡೆಯುತ್ತಲೇ ಇವೆ. ತಾಲೂಕಿನ ಕಂದಗಲ್ಲ ಗ್ರಾಮ ಪಂಚಾಯಿತಿಯ ವತಿಯಿಂದ 14 ನೇ ಹಣಕಾಸು ಉಳಿಕೆ ಮತ್ತು ಬಡ್ಡಿಹಣದಲ್ಲಿ ಪಂಚಾಯಿತಿ ವ್ಯಾಪ್ತಿಯ ಗಜಾಪುರ ಸರಕಾರಿ ಶಾಲೆಯ ಗೋಡೆಗೆ ರೈಲು ಬೋಗಿಯ ಮಾದರಿಯ ಬಣ್ಣ ಬಳಿದು ಆಕರ್ಷಕ ರೀತಿಯಲ್ಲಿ ಶಾಲೆಯನ್ನು ಬದಲಾಯಿಸಲಾಗಿದೆ.
ಗಮನ ಸೆಳೆಯುವ ಉದ್ದೇಶದಿಂದ ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯ ಲಾಗಿದೆ. ಅದಕ್ಕೆ “ವಿದ್ಯಾವಾಹಿನಿ ಎಕ್ಸ್‌ಪ್ರೆಸ್‌’ ಎಂದು ಹೆಸರಿಡಲಾಗಿದ್ದು, ಶಾಲೆಯ ಡಿಐಎಸ್‌ಇ ಕೋಡ್‌ನ್ನು ಕೂಡ ಬರೆಯಲಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಯವರ ಮಾರ್ಗದರ್ಶನ, ಗ್ರಾಮ ಪಂಚಾಯಿತಿ ಅಧ್ಯಕ್ಷವಿಶ್ವನಾಥ, ಹಾಗೂ ಸರ್ವಸದಸ್ಯರ ಸಹಕಾರ ದಿಂದ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ನಿರ್ಮಾಣವನ್ನು ಹೊಂದುವ ಗುರಿ ಇದೆ ಎಂದು ಕಂದಗಲ್ಲ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಮಾರುತೇಶ ಹೇಳಿದರು.