ರೈಲು ನಿಲ್ದಾಣಕ್ಕೆ ವಾಸುದೇವ ಬಲವಂತ ಫಡಕೆ ಹೆಸರಿಡಲು ಪ್ರಧಾನಿಗೆ ಮನವಿ

ಶಹಾಭಾದ:ಸೆ.13:ನಗರದ ಶಹಾಬಾದ ರೈಲು ನಿಲ್ದಾಣಕ್ಕೆ ಸ್ವಾಂತಂತ್ರ್ಯ ಸೇನಾನಿ ದಿವಂಗತ ವಾಸುದೇವ ಬಲವಂತ ಫಡಕೆ ಅವರ ಹೆಸರಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಿದ್ದೆವೆ ಎಂದು ಗಣ್ಯರಾದ ರಾಜೇಶ ವರ್ಮಾ ತಿಳಿಸಿದರು.

ಅವರು ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,

ಸ್ವಾಂತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ನಿದ್ದೆಗೆಡಿಸಿದ ಸ್ವಾಂತಂತ್ರ್ಯ ಸೇನಾನಿ ವಾಸುದೇವ ಬಲವಂತ ಫಡಕೆ ಅವರನ್ನು ಬಂಧಿಸಲು ಬ್ರಿಟಿಷ ಪೊಲೀಸರು ಏನೆಲ್ಲಾ ಹರಸಾಹಸ ಮಾಡಿದರೂ ಅವರ ಕಣ್ ತಪ್ಪಿಸಿ ಕಲಬುರಗಿ ಜಿಲ್ಲೆ ಆಗಿನ ಚಿಕ್ಕ ರೇಲ್ವೆ ನಿಲ್ದಾಣವಾದ ಶಹಾಬಾದಗೆ 8 ಎಪ್ರಿಲ್ 1879 ರಂದು ಬಂದಿದ್ದರು.ಶಹಾಬಾದ ರೈಲು ನಿಲ್ದಾಣಕ್ಕೆ ಪ್ರಥಮ ಸ್ವಾತಂತ್ರ್ಯ ಸೇನಾನಿ ಬಂದಿದ್ದರಿಂದ ಅವರ ಹೆಸರನ್ನೇ ರೇಲ್ವೆ ನಿಲ್ದಾಣಕ್ಕೆ ಇಡಬೇಕು.ಇದರಿಂದ ಅವರಿಗೆ ಸಲ್ಲುವ ಗೌರವವಾಗಿದೆ ಎಂದು ಪ್ರಧಾನಿಯವರಲ್ಲಿ ಪತ್ರದ ಮೂಲಕ ಮನವಿ ಮಾಡಿದರು.

ಬಿಜೆಪಿ ಮಾಜಿ ಅಧ್ಯಕ್ಷ ಸುಭಾಷ ಜಾಪೂರ, ಅನಿಲ ಹಿಬಾರೆ, ಅಮರ ಹದನೂರ, ಕನಕಪ್ಪ ದಂಡಗುಲಕರ್, ಬಸವರಾಜ ಸಾತಿಹಾಳ, ದೇವೇಂದ್ರ ಕಾರೋಳ್ಳಿ, ಶಿವಕುಮಾರ ನಾಟೀಕಾರ ಉಪಸ್ಥಿತರಿದ್ದರು.