
ಯಾದಗಿರಿ:ಅ.14: ಜಿಲ್ಲಾ ಕೇಂದ್ರವಾಗಿ ಸುಮಾರು 13 ವರ್ಷ ಗತಿಸಿದರೂ ಸಹ ಇದುವರೆಗೆ ಯಾದಗಿರಿ ನಿಲ್ದಾಣದಲ್ಲಿ ಅನೇಕ ರೈಲುಗಳು ನಿಲುಗಡೆಯಾಗದೇ ಇರುವುದು ಅನಾನುಕೂಲವಾಗಿದೆ. ಕೂಡಲೇ ಎಲ್ಲ ರೈಲುಗಳನ್ನು ಜಿಲ್ಲಾ ಕೇಂದ್ರ ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆಗೆ ಕ್ರಮ ವಹಿಸಬೇಕು.
ಇದಲ್ಲದೇ ಕೊರೊನಾ ನಂತರ ಬಂದ್ ಆಗಿರುವ ಇಂಟರಸಿಟಿ ರೈಲು ಪುನಾರಂಭ ಮಾಡಬೇಕು. ಇದರ ಜೊತೆಗೆ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳನ್ನು ಅಂದರೆ ಲಿಫ್ಟ್ ವ್ಯವಸ್ಥೆ,ರೈಲು ನಿಲ್ದಾಣದ ಪ್ಲಾಟಫಾರಂ ಗಳಲ್ಲಿ ಸಂಪೂರ್ಣ ನೆರಳಿನ ವ್ಯವಸ್ಥೆ ಆಸನದ ವ್ಯವಸ್ಥೆಗಳು ಅಭಿವೃದ್ಧಿಪಡಿಸಬೇಕು.
ಮಂತ್ರಾಲಯ ಹೊರತು ಪಡಿಸಿ ಯಾದಗಿರಿಯಿಂದಲೇ ಅತಿಹೆಚ್ಚು ಆದಾಯ ನೀಡುವ ನಿಲ್ದಾಣವಾಗಿದ್ದು ನಿತ್ಯ ಗುಳೆ ಹೋಗುವವರು ಅತಿಹೆಚ್ಚು ಇದ್ದಾರೆ. ಆದ್ದರಿಂದ ಮೂಲಸೌಕರ್ಯಗಳನ್ನು ಒಗಿಸಿರುವುದಿಲ್ಲ. ಕೂಡಲೇ ಸೌಕರ್ಯ ಒದಗಿಸಲು ಕ್ರಮ ವಹಿಸಬೇಕು.
ಬೃಹತ್ ಪ್ರತಿಭಟನೆ ರ್ಯಾಲಿ ಮೂಲಕ ಮನವಿ ಸಲ್ಲಿಸಲಾಗುತ್ತಿದ್ದು ಬೇಡಿಕೆ ಈಡೇರಿಸಲು ಕೋರಿದ್ದಾರೆ.
ಪರಮ ಪೂಜ್ಯ ಶ್ರೀ ಭಗವಾನ್ ವೇದವ್ಯಾಸ ಸಂಸ್ಥಾನ ಮಠ ಊರಸಗುಂಡಗಿ.ನಿಂಗಪ್ಪ ಜಾಲಗಾರ್. ಯಲ್ಲಪ್ಪ. ಅಂಬರೀμï. ಶಂಕರ್. ನಿಂಗಪ್ಪ ನಾಗಪ್ಪ. ಪ್ರಭು. ರವಿ. ಹಣಮಂತ .ವಿಜಯ. ಶರಣಪ್ಪ. ನಂದಪ್ಪ. ಸಿದ್ರಾಮ. ತಾಯಪ್ಪ. ಮರಿಲಿಂಗ.ಮರೆಪ್ಪ.ಮಹೇಶ್.ಭೀಮಾಶಂಕರ. ಸಾಬು ಕಿರಣ್.ಇನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು