ರೈಲು ಡಿಕ್ಕಿ – ೮ ಮೇಕೆ ಸಾವು

ರಾಯಚೂರು.ಜು.೧೭- ಹತ್ತಿ ಮಾರುಕಟ್ಟೆ ಬಳಿ ರಾಯಚೂರನಿಂದ ಹೈದ್ರಾಬಾದ್‌ಗೆ ಹಾಕಲಾದ ರೈಲ್ವೆ ಹಳಿಗೆ ಬಿದ್ದು ಸುಮಾರು ೮ ಮೇಕೆಗಳು ಮೃತಪಟ್ಟ ಘಟನೆ ನಡೆದಿದೆ.
ಎಂದಿನಂತೆ ರೈಲ್ವೆ ಹಳಿ ಪಕ್ಕದಲ್ಲಿ ಮೇಕೆಗಳನ್ನು ಮೇಯಿಸಲಾಗುತ್ತಿತ್ತು. ಹಳಿಯ ಮೇಲೆ ರೈಲು ಬರುವ ಸಂದರ್ಭದಲ್ಲಿ ಶಬ್ಧ ಮಾಡಿದ ಪರಿಣಾಮ ೧೦ ಮೇಕೆಗಳು ರೈಲಿನ ಹಳಿನ ಮೇಲೆ ಓಡಲು ಆರಂಭಿಸಿದವು. ಇದರಿಂದ ರೈಲು ಅಪಘಾತದಲ್ಲಿ ಸಿಲುಕಿ ೮ ಮೇಕೆಗಳು ಸತ್ತತಂಹ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ವ್ಯಕ್ತಿಯ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ.