ರೈಲು ಡಿಕ್ಕಿ: ಕುರಿಗಾಹಿ ಮಹಿಳೆ ಸಾವು

ಕಲಬುರಗಿ,ಸೆ.17-ರೈಲು ಡಿಕ್ಕಿ ಹೊಡೆದು ಕುರಿಗಾಹಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಮಲಾಪುರ ತಾಲ್ಲೂಕಿನ ಚವ್ಹಾಣ್ ತಾಂಡಾ ಬಳಿ ನಡೆದಿದೆ.
ಮೃತಳನ್ನು ಚವ್ಹಾಣ್ ತಾಂಡಾದ ಸೀತಾಬಾಯಿ ಬಿಕ್ಕು ಚವ್ಹಾಣ (71) ಎಂದು ಗುರುತಿಸಲಾಗಿದೆ.
ಬೀದರ್-ಕಲಬುರಗಿ ರೈಲ್ವೆ ಹಳಿಯ ಮೇಲೆ ಇವರು ಕುರಿ ಹೊಡೆದುಕೊಂಡು ಹೋಗುತ್ತಿದ್ದ ವೇಳೆ ಬೀದರ್-ಕಲಬುರಗಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರೈಲು ಹಳಿಯ ಮೇಲೆ ಕುರಿ ಹೊಡೆದುಕೊಂಡು ಹೋಗುತ್ತಿರುವುದನ್ನು ರೈಲು ಚಾಲಕ ದೂರದಿಂದಲೇ ಗಮನಿಸಿ ಹಾರ್ನ ಮಾಡಿದರೂ ಮಹಿಳೆಯ ಕಿವಿ ಕೇಳಿಸುತ್ತಿರಲಿಲ್ಲವಾದ್ದರಿಂದ ಅದು ಆಕೆಯ ಕಿವಿಗೆ ಬಿದ್ದಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.