ರೈಲು ಡಿಕ್ಕಿ : ಆನೆ ಸಾವು

ಹೊಜೈ, ಸೆ.೯- ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಕಾಡು ಆನೆಯೊಂದು ಸಾವನ್ನಪ್ಪಿದೆ. ಆನೆ ರೈಲ್ವೆ ಹಳಿ ದಾಟಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಎನ್‌ಎಫ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಸಬ್ಯಸಾಚಿ ಡಿ ಎಎನ್‌ಐಗೆ ತಿಳಿಸಿದ್ದಾರೆ.

ಹೊಜೈ ಜಿಲ್ಲೆಯ ಹವಾಯಿಪುರ ಬಳಿ ಗುರುವಾರ ಸಂಜೆ ೬.೨೦ ರ ಸುಮಾರಿಗೆ ಆನೆ ರೈಲ್ವೆ ಹಳಿ ದಾಟಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಸಿಮೆಂಟ್ ತುಂಬಿದ್ದ ಗೂಡ್ಸ್ ರೈಲಿಗೆ ಆನೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆನೆ ಹಳಿ ಮೇಲೆ ಬಿದ್ದು ಕೊನೆಯುಸಿರೆಳೆದಿದೆ.