ರೈಲಿನಲ್ಲಿ ಸಾಗಿಸುತ್ತಿದ್ದ 22 ಕೆ.ಜಿ ಗಾಂಜಾ ಜಪ್ತಿ: ಇಬ್ಬರ ಬಂಧನ

ಕಲಬುರಗಿ:ಮಾ.30: ಪುಣೆ ಹಾಗೂ ಭುವನೇಶ್ವರ ರೈಲಿನಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಆರೋಪದಡಿ ಒರಿಸ್ಸಾ ಮೂಲದ ಇಬ್ಬರನ್ನು ಗುರುವಾರ ರಾತ್ರಿ ವಾಡಿ ರೈಲ್ವೆ ಪೆÇಲೀಸರು ಬಂಧಿಸಿದ್ದಾರೆ.

ಒರಿಸ್ಸಾದ ಗಜಪತಿ ಜಿಲ್ಲೆಯ ಲಾಕೀರ್ ಪೇಟ್ ಗ್ರಾಮದ ರಬಿಕುಣಿ ಮಲಿಕ್ 28 ಹಾಗೂ ಅಭಿಮನ್ಯು ಮಲಿಕ್ ದುಡ್ಲಾ 26 ಬಂಧಿತ ಆರೋಪಿಗಳು.

ಬಂಧಿತರಿಂದ 22 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೆÇಲೀಸರು ಪುಣೆ ಹಾಗೂ ಭುವನೇಶ್ವರ ರೈಲು ತಪಾಸಣೆ ಮಾಡಿದರು.
ಈ ವೆಳೆ ಚೀಲದಲ್ಲಿ ಇರಿಸಿದ್ದ 22 ಕೆ.ಜಿ ಗಾಂಜಾ ಪತ್ತೆಯಾಗಿದೆ.