
ಕೆಜಿಎಫ್, ಮೇ.೩-ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ಪರವಾಗಿ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಸಂಪಂಗಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾರಿಕುಪ್ಪಂ ರೈಲ್ವೆ ನಿಲ್ದಾಣದಿಂದ ಬಂಗಾರಪೇಟೆ ರೈಲು ನಿಲ್ದಾಣದವರೆಗೂ ಪ್ರಯಾಣಿಕರೊಂದಿಗೆ ಪ್ರಯಾಣ ಮಾಡುವ ಮೂಲಕ ದಿನ ನಿತ್ಯ ಪ್ರಯಾಣಿಕರು ಜನಸಂದಣಿಯಲ್ಲಿ ನಿತ್ಯ ಅನುಭವಿಸುತ್ತಿರುವ ಕಷ್ಟಗಳನ್ನು ಖುದ್ಧು ಅನುಭವಿಸಿದ ಘಟನೆ ನಡೆಯಿತ್ತು .
ದಿನ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಕಷ್ಟಗಳ ಪರಿಹಾರವಾಗಬೇಕಾದರೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಕೇಂದ್ರದ ಬಿಜೆಪಿ ಸರ್ಕಾರ ಈಗಾಗಲೇ ರೈಲ್ವೆ ನಿಲ್ದಾಣಗಳ ಅಭಿವೃದ್ದಿಗಾಗಿ ೫೦೦ ಕೋಟಿ ಅನುದಾನವನ್ನು ನೀಡಿರುವುದರಿಂದ ರೈಲ್ವೆ ನಿಲ್ದಾಣಗಳ ಉನ್ನತಿಕರಣ ಕಾಮಗಾರಿಯು ಬರದಿಂದ ಸಾಗುತ್ತಿದೆ ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶವನ್ನು ಸಮರ್ಪಕವಾಗಿ ಮುನ್ನೆಡೆಸುತ್ತಿರುವ ನರೇಂದ್ರಮೋದಿರವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಪ್ರಯಾಣಿಕರು ನಿತ್ಯ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದರು .
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಕಳೆದ ೩೫ ವರ್ಷಗಳಿಂದ ಅಧಿಕಾರವನ್ನು ಅನುಭವಿಸಿದ ಮಾಜಿ ಸಂಸದ ಮುನಿಸ್ವಾಮಿ ರೈಲ್ವೆ ನಿಲ್ದಾಣಗಳ ಉನ್ನತಿಕರಣಕ್ಕೆ ಮುಂದಾಗಲಿಲ್ಲ ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರಮೋದಿ ರವರು ಸಾವಿರಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಕುಟುಂಭಗಳ ಆರ್ಥಿಕತೆಯು ವೃದ್ದಿಗೊಳಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.