ರೈಲಿನಲ್ಲಿ ಬೆಂಕಿ ೧೦ ಮಂದಿ ಸಾವು

ಚೆನ್ನೈ,ಆ.೨೬:ಲೇಖನ ಸಾಮಗ್ರಿಗಳಿರುವ ರೈಲಿನ ವಿಭಾಗಕ್ಕೆ ಬೆಂಕಿ ತಗುಲಿ ೧೦ ಮಂದಿ ಸುಟ್ಟು ಕರಕಲಾಗಿರುವ ದಾರುಣ ಘಟನೆ ತಮಿಳುನಾಡಿನ ಮದುರೈ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಅಕ್ರಮವಾಗಿ ಅನಿಲ ಸಿಲಿಂಡರ್ ರೈಲಿನ ಒಳಗಡೆ ಇಟ್ಟುಕೊಂಡದ್ದೆ ಈ ದುರಂತಕ್ಕೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ದೂಷಿಸಿದ್ದಾರೆ.ಉತ್ತರ ಪ್ರದೇಶದ ಲಖನೌನಿಂದ ೬೫ ಪ್ರಯಾಣಿಕರಿದ್ದ ಖಾಸಗಿ ಕೋಚ್‌ನಲ್ಲಿ ಈ ದುರಂತ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದರು.ಮುಂಜಾನೆ ೫.೧೫ರ ಸಮಯದಲ್ಲಿ ಲೇಖನ ಸಾiಗ್ರಿ ಇರುವ ಬೋಗಿಯ ವಿಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.ನಿನ್ನೆ ನಾಗರಕೋಯಿಲ್ ಜಂಕ್ಷನ್‌ನಲ್ಲಿ ರೈಲಿನ ಸಂಖ್ಯೆ ೧೬೭೩೦ (ಪುನಲೂರ್-ಮದುರೈ ಎಕ್ಸ್‌ಪ್ರೆಸ್) ರೈಲಿಗೆ ಖಾಸಗಿ ಪ್ರಯಾಣಿಕರ ಕೋಚ್‌ನ್ನು ಜೋಡಿಸಲಾಗಿತ್ತು.ಆದರೆ,ಅಕ್ರಮವಾಗಿ ಅನಿಲ್ ಸಿಲಿಂಡರ್ ಹೊತ್ತೊಯ್ದಿದ್ದರಿಂದ ಈ ಅವಘಡಕ್ಕೆ ಕಾರಣವಾಗಿದೆ.ಈ ಖಾಸಗಿ ಪ್ರಯಾಣಿಕರ ಕೋಚ್‌ನಲ್ಲಿ ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್ ಕೊಂಡೊಯ್ದು, ಟೀ ತಯಾರಿಸಲು ಬಳಸುತ್ತಿದ್ದ ವೇಳೆ ನಿಂತಿದ್ದ ಕೋಚ್‌ಗೆ ಬೆಂಕಿ ತಗುಲಿದೆ.ಘಟನೆಯಲ್ಲಿ ಬಹುತೇಕ ಪ್ರಯಾಣಿಕರು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೋಚ್‌ನಿಂದ ಹೊರ ಬಂದು ಸುರಕ್ಷಿತವಾಗಿ ಪಾರಾಗಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ಬೆಂಕಿ ತಗುಲುವ ಮೊದಲೇ ಹೊರ ಬಂದಿದ್ದರು. ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ೧೦ ಲಕ್ಷ ರೂ.ಗಳನ್ನು ದಕ್ಷಿಣ ರೈಲ್ವೆ ಪ್ರಕಟಿಸಿದೆ. ತನಿಖೆಯಿಂದಷ್ಟೇ ದುರಂತಕ್ಕೆ ನಿಖರ ಕಾರಣ ತಿಳಿಯಲಿದೆ.