ರೈಲಿಗೆ ಸಿಲುಕಿದ ವ್ಯಕ್ತಿ ರಕ್ಷಿಸಿದ ಮಹಿಳಾ ಪೋಲಿಸ್

ಹರಿದ್ವಾರ,ಮೇ.೧-ರೈಲು ಹತ್ತುವಾಗ ಮತ್ತು ಇಳಿಯುವಾಗ ಅಪಘಾತಗಳು ಸಂಭವಿಸುತ್ತವೆ. ರೈಲು ಚಲಿಸುವಾಗ ಹಳಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ ಕೆಲವರು ಪ್ರಾಣ ಕಳೆದುಕೊಂಡರೆ, ಇನ್ನು ಕೆಲವರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರ ಧೈರ್ಯದಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ಇಂತಹದೊಂದು ಘಟನೆ ಹರಿದ್ವಾರದಲ್ಲಿ ನಡೆದಿದೆ. ರೈಲಿನಡಿ ಸಿಲುಕಿದ್ದ ವ್ಯಕ್ತಿಯ ಪ್ರಾಣವನ್ನು ಆರ್‌ಪಿಎಫ್ ಮಹಿಳಾ ಪೇದೆ ಉಮಾ ಶೌರ್ಯ ಮತ್ತು ಚಾಕಚಕ್ಯತೆಯಿಂದ ರಕ್ಷಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರ ಸಮೀಪದ ಲಕ್ಸಾರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಊಟ ತರಲು ರೈಲಿನಿಂದ ಇಳಿದಿದ್ದಾನೆ. ಅವನು ಇಳಿದ ರೈಲು ಚಲಿಸುತ್ತಿದ್ದಂತೆ, ಅವನು ಓಡಿ ಹತ್ತಲು ಪ್ರಯತ್ನಿಸಿದ್ದು, ಆದರೆ, ರೈಲಿನ ವೇಗದಿಂದಾಗಿ ಇದ್ದಕ್ಕಿದ್ದಂತೆ ಬಾಗಿಲಲ್ಲಿ ನಿಯಂತ್ರಣ ತಪ್ಪಿ ರೈಲು ಹಳಿ ಮತ್ತು ಪ್ಲಾಟ್ ನಡುವೆ ಬಿದ್ದಿದ್ದಾನೆ. ರೈಲು ಚಲಿಸುತ್ತಲೇ ಇದೆ.
ಡ್ಯೂಟಿಯಲ್ಲಿದ್ದ ಆರ್‌ಪಿಎಫ್‌ನ ಮಹಿಳಾ ಪೇದೆಯೊಬ್ಬರು ರೈಲಿನ ಕೆಳಗೆ ಬಿದ್ದಂತಹ ಸದ್ದು ಕೇಳಿದ ತಕ್ಷಣ ಓಡಿ ಬಂದಿದ್ದಾರೆ.
ಕೂಡಲೇ ರೈಲನ್ನು ನಿಲ್ಲಿಸಲಾಗಿದೆ .ಬಳಿಕ ಪ್ರಯಾಣಿಕರನ್ನು ರಕ್ಷಿಸಿ ಪ್ಲಾಟ್‌ಫಾರ್ಮ್‌ಗೆ ಕರೆದು ಕೊಂಡು ಬಂದು ಆರೈಕೆ ಮಾಡಲಾಗಿದೆ.
ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿದ ಆರ್‌ಪಿಎಫ್ ಮಹಿಳಾ ಪೇದೆ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಕಾಸ್ಟೇಬಲ್ ಕೆ ಪ್ರಯಾಣಿಕನನ್ನು ರಕ್ಷಿಸಿದರು. ಪ್ರಯಾಣಿಕರನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಚ್ಚೆದೆ ಹಾಗೂ ಚಾಕಚಕ್ಯತೆಯಿಂದ ಪ್ರಯಾಣಿಕನ ಪ್ರಾಣ ಉಳಿಸಿದ ಆರ್ ಪಿಎಫ್ ಕಾನ್ ಸ್ಟೇಬಲ್ ಗೆ ನೆಟಿಜನ್ ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.