ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ

ಧಾರವಾಡ, ಮಾ 28: ರೈಲ್ವೆ ಟ್ರ್ಯಾಕ್‍ಗೆ ತಲೆಯೊಡ್ಡಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪವನ್ ಶಾಲೆ ಹಿಂಭಾಗದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಮೃತ್ಯುಂಜಯ ಶೇಖಪ್ಪಾ ತೊಟಗೇರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.