ರೈತ ಹುತಾತ್ಮ ದಿನಾಚರಣೆ


(ಸಂಜೆವಾಣಿ ವಾರ್ತೆ)
ಮುನವಳ್ಳಿ,ಜು.23: ಪಟ್ಟಣದ ಶ್ರೀ ಸಾವಳಗಿ ಶಿವಲಿಂಗೇಶ್ವರ ದೇವಸ್ಥಾನದ ಸಬಾ ಭವನದಲ್ಲಿ ರೈತ ಹುತಾತ್ಮ ದಿನಾಚರಣೆ ಜರುಗಿತು.
ಸಾನಿಧ್ಯ ವಹಿಸಿ ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿದರು ಮುಂಬರುವ ದಿನಗಳಲ್ಲಿ ಹುತಾತ್ಮ ದಿನಾಚರಣೆ ಆಚರಿಸುವದರ ಜೊತೆಗೆ ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆಯಾಗಿ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಬೇಕು ಅನ್ನದಾತ ಸುಖದಿಂದ ಇದ್ದರೆ ಎಲ್ಲರೂ ಸುಖದಿಂದ ಇದ್ದಂತೆ ಎನ್ನುವ ಮಾತನ್ನು ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿ ಉಮೇಶ ಬಾಳಿ ಮಾತನಾಡಿದರು ರೈತರ ಮೇಲೆ ದೌರ್ಜನ್ಯ ಅಥವಾ ಅನ್ಯಾಯವಾದರೆ ಅದು ಒಂದು ಸ್ಥಳಕ್ಕೆ ಮಾತ್ರ ಸೀಮಿತವಾಗದೇ ರಾಜ್ಯ ರಾಷ್ಟ್ರಾಧ್ಯಂತ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ನಡೆದು ಸರಕಾರಗಳೆ ಬದಲಿಯಾದ ಉದಾಹರಣೆಗಳು ನಮ್ಮ ಮುಂದಿವೆ ನರಗುಂದ ಬಂಡಾಯ ಇದಕ್ಕೊಂದು ನಿದರ್ಶನ ನಮ್ಮ ಜಿಲ್ಲೆಯಲ್ಲಿ ಈ ಸಲ ಮಳೆ ಸರಿಯಾಗಿ ಆಗದಿರುವುದರಿಂದ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ರೈತರ ಮೇಲಿರುವ ಪೊಲೀಸ ಪ್ರಕರಣಗಳನ್ನು ಕೈ ಬಿಡಬೇಕು ಎಂದರು.
ಪ್ರಾಸ್ತಾವಿಕವಾಗಿ ಪಂಚನಗೌಡ ದ್ಯಾಮನಗೌಡ್ರ ಮಾತನಾಡಿ ಕೆಲ ವರ್ಷಗಳ ಹಿಂದೆ ಸತತ ಮಳೆಯಾಗಿದ್ದರಿಂದ ಕಳಸಾ ಬಂಡೂರಿ ನದಿ ಜೋಡಣೆ ಕುರಿತು ಮಾತನಾಡುವುದು ಕಡಿಮೆಯಾಗಿತ್ತು ಈಗ ಮತ್ತೆ ಮಳೆ ಕಡಿಮೆಯಾಗಿರುವುದರಿಂದ ನದಿ ಜೋಡಣೆಯ ಕಾಮಗಾರಿಯನ್ನು ಈಗಿನ ಸರಕಾರ ಪೂರ್ತಿಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ರೈತರು ಹೋರಾಟಕ್ಕೆ ಮನಸ್ಸು ಮಾಡುವುದಿಲ್ಲ ಹೋರಾಟ ಮಾಡಿದರೆ ಜೀವದ ಹಂಗು ತೊರೆದು ಹೋರಾಟ ಮಾಡುತ್ತಾರೆ ಎಂದರು.
ರೈತರಾದ ಶಂಕರಗೌಡ ರಾಮನಗೌಡ ಪಾಟೀಲ, ರೈತ ಮಹಿಳೆ ಅನುಸೂಯಾ ಬಸವರಾಜ ಹನಸಿ ಅವರನ್ನು ನೇಗಿಲಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮುತ್ತಣ್ಣ ಘಟವಾಳಿಮಠ, ಬಾಳಪ್ಪ ರಡ್ರಟ್ಟಿ, ದ್ಯಾಮನಗೌಡ ಬಕಾಡೆ, ಮನೋಹರ ನಾಯ್ಕ, ಶಿವಪುತ್ರಪ್ಪ ಕೆಳಗಡೆ, ಜಯಪ್ಪ ಹಂಜಿ, ಮಾರುತಿ ನರಗುಂದ, ಈರಣ್ಣ ಬಸಲಿಗುಂದಿ, ಕಲ್ಲಪ್ಪ ನಲವಡೆ, ರವಿ ದ್ಯಾಮನಗೌಡರ, ಪ್ರಕಾಶ ಕಾಮಣ್ಣವರ, ರಾಮನಗೌಡ ಗೀದಿಗೌಡ್ರ, ಪ್ರದೀಪ ದಿವಟಗಿ, ರವಿ ಹುರಳಿ, ಹನಮಂತ ಹಡಪದ, ಕಳಸಾ ಬಂಡೂರಿ ಹೊರಾಟ ಸಮಿತಿಯ ಸದಸ್ಯರು ರೈತರು ಇತರರು ಉಪಸ್ಥಿತರಿದ್ದರು.
ಬಾಳು ಹೊಸಮನಿ ಕಾರ್ಯಕ್ರಮ ನೀರೂಪಿಸಿ ವಂದಿಸಿದರು.