ರೈತ ಹಿತರಕ್ಷಣಾ ಸಮಿತಿ ಸರದಿ ಉಪವಾಸ ಸತ್ಯಾಗ್ರಹ

ಸಂಜೆವಾಣಿ ವಾರ್ತೆ
ಮಂಡ್ಯ ಡಿ.24: ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಹಾಗೂ ಪದೇ ಪದೇ ರಾಜ್ಯದಿಂದ ನೀರು ಬಿಡುವಂತೆ ಆದೇಶ ನೀಡುತ್ತಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹಕ್ಕೆ ಇಂದು ಮಳವಳ್ಳಿಯ ಸೌಹಾರ್ದ ನಾಗರೀಕ ವೇದಿಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದರು.
ಜಿ¯್ಲÁ ರೈತ ಹಿತರP್ಷÀಣ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಕಾವೇರಿ ಚಳವಳಿ ಸರ್ಕಾರ ಮತ್ತು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ, ಹೋರಾಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿz್ದÁರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಆಕ್ರೋಶಿಸಿದರು.
ರೈತರ ಕಣ್ಣಿಗೆ ಬಟ್ಟೆ ಕಟ್ಟುವ ಕಿವಿಗೆ ಹೂವು ಮೂಡಿಸುವ ಕೆಲಸ ಮಾಡಬೇಡಿ, ಕಳೆದ ನಾಲ್ಕು ತಿಂಗಳಿಂದ ಚಳವಳಿ ನೀರಿನ ಅಭಾವದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾ ಬಂದಿದೆ ಇದೀಗ ಸಚಿವರು ಬೇಸಿಗೆ ಬೆಳೆಗೆ ನೀರು ಇಲ್ಲ, ಕುಡಿಯಲು ಮಾತ್ರ ಬಳಕೆ ಎಂದಿz್ದÁರೆ, ಮುನ್ನೆಚ್ಚರಿಕೆ ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಯಾವ ಬಾಯಲ್ಲಿ ಹೇಳುತ್ತಾರೆ, ಬಿಳಿ ಗುಂಡ್ಲು ಅಳತೆ ಮಾಪನದಲ್ಲಿ ತೆಗೆಸಲಿ, ಯಾವ್ಯಾವ ದಿನ, ಯಾವ ತಿಂಗಳು ಎಷ್ಟು ನೀರು ಹರಿದಿದೆ ಎಂಬ ವಾಸ್ತವ ಸತ್ಯ ಗೊತ್ತಾಗಲಿದೆ,ತಮಿಳುನಾಡು ಸರ್ಕಾರ ಇಷ್ಟು ನೀರು ಹರಿದು ಬಂದಿದ್ದು, ಮತ್ತಷ್ಟು ನೀರು ಕೊಡಬೇಕಾಗಿದೆ ಎಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಹೇಳಿದೆ, ಇಷ್ಟೆಲ್ಲ ಇದ್ದರೂ ನೆರೆ ರಾಜ್ಯಕ್ಕೆ ನೀರು ಬಿಟ್ಟಿಲ್ಲವಾ ಎಂದು ಹರಿಹಾಯ್ದರು.
ಹೋರಾಟಗಾರರಿಗೆ ಚಳವಳಿ ಆರಂಭಿಸುವುದು ಗೊತ್ತು, ನಿಲ್ಲಿಸುವುದು ಗೊತ್ತು ಅದನ್ನ ಸಚಿವರು ಹೇಳಬೇಕಾಗಿಲ್ಲ ಬದಲಾಗಿ ಕಾವೇರಿ ವಿಚಾರದಲ್ಲಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಹೇಳಿದರು.0
ನಗರದ ಸರ್.ಎಂ.ವಿ. ಪ್ರತಿಮೆ ಎದುರು ಉಪವಾಸದಲ್ಲಿ ವೇದಿಕೆ ಕಾರ್ಯದರ್ಶಿ ಎಂ. ರೂಪೇಶ್ ಕುಮಾರ್, ಮುದ್ದು ಮಲ್ಲು, ರೇಖಾ ಮಾದೇಶ್, ಎನ್ ಪವಿತ್ರ, ಆಶಾ ಆನಂದ್ ಹಾಗೂ ಭಾರತಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.