ರೈತ ಸಂಪರ್ಕ ಕೇಂದ್ರ ಇಂಡಿ, ಬಳ್ಳೊಳ್ಳಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ

ಇಂಡಿ :ಜೂ.9: ತಾಲೂಕು ಕೃಷಿ ಇಲಾಖೆ ವತಿಯಿಂದ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮತ್ತು ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಿಸಲು ಪ್ರಾರಂಭ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ಸಜ್ಜೆ, ಹೆಸರು, ತೊಗರಿ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತ ಬೀಜಗಳನ್ನು ವಿತರಿಸಲಾಗುತ್ತಿದ್ದು ತಾಂಬಾ, ಲಚ್ಯಾಣ ಮತ್ತು ಅಥರ್ಗಾ ರೈತ ಸಂಪರ್ಕ ಕೇಂದ್ರಗಳಲ್ಲಿ ಶೀಘ್ರವೇ ಪ್ರಾರಂಭಿಸಲಾಗುವದು ಎಂದರು.

ರೈತರಿಗೆ ಸಮರ್ಪಕ ಬೀಜ ವಿತರಿಸಲು ಇಲಾಖೆ ಅಗತ್ಯ ಸಿದ್ದತೆ ಮಾಡಿಕೊಂಡಿದೆ.ರೈತರು ಸರಕಾರದ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಬಿತ್ತನೆ ಮಾಡುವಷ್ಟು ಇನ್ನೂ ಮಳೆಯಾಗಿಲ್ಲ. ರೈತರು ಸೂಕ್ತ ಮಳೆ ಯಾದ ನಂತರ ಬೀಜ ತೆಗೆದುಕೊಂಡು ಹೋಗಿ ಬತ್ತನೆ ಮಾಡಬೇಕು ಎಂದರು.

ರೈತ ಸಂಪರ್ಕ ಕೇಂದ್ರದ ವಿ.ಎಸ್.ವಗದರಗಿ, ಕೃಷಿ ಅಧಿಕಾರಿ ಬಸವರಾಜ ಬಿರಾದಾರ, ಪ್ರಗತಿಪರ ರೈತರಾದ ಲಾಲ ಅಹಮ್ಮದ ಮುಲ್ಲಾ,ಅರ್ಜುನ ಶಿರನಾಳ,ಅಲ್ಲಾಬಕ್ಷ ಗೊರೆ,ಬಸಪ್ಪ ನಾಟಿಕಾರ,ಶ್ರೀಶೈಲ ಅಡವಿ, ಅನವುಗಾರ ಮಾಂತೇಶ ಮೇಲಿನಮನಿ ಸೆರಿದಂತೆ ಮತ್ತಿತರಿದ್ದರು.