ರೈತ ಸಂಪರ್ಕ ಕೇಂದ್ರದಲ್ಲಿ  ಬಿತ್ತನೆ ಬೀಜ ವಿತರಣೆ

ಹರಿಹರ.ಜೂ.೭: ರೈತರಿಗೆ ಸರ್ಕಾರವು ರಿಯಾಯ್ತಿ ದರದಲ್ಲಿ ನೀಡುವ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ವಿತರಣೆ ಮಾಡಬೇಕು. ಕಳಪೆ ಬೀಜಗಳ ವಿತರಣೆಯಾಗಿ ರೈತರು ಸಂಕಷ್ಟ ಎದುರಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಶಾಸಕ ಶಾಸಕ ಬಿ.ಪಿ. ಹರೀಶ್ ಎಚ್ಚರಿಕೆ ನೀಡಿದರು.ನಗರದ ಎಪಿಎಂಸಿ ಆವರಣದಲ್ಲಿ ಇರುವ ರೈತ ಸಂಪರ್ಕ ಕೇಂದ್ರದಲ್ಲಿ  ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ತೊಂದರೆಯಾಗದAತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ದುರ್ಬಳಕೆ, ತಾರತಮ್ಯ ಆಗದಂತೆ ವ್ಯವಸ್ಥೆ ಮಾಡಬೇಕು. ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಲಹೆಗಳನ್ನು ಅಧಿಕಾರಿಗಳು ರೈತರ ಗಮನಕ್ಕೆ ತರಬೇಕು. ಬೆನ್ನೆಲು ಬಾಗಿರುವ ರೈತ ಕುಲಕ್ಕೆ ಅನುಕೂಲವಾಗುವ ಯೋಜನೆಗಳು ಜಾರಿಯಲ್ಲಿ ಇದೇ. ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.ತಾಲ್ಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ರೈತರು ಜಮೀನುಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅವರ ಅನುಕೂಲಕ್ಕೆ ತಕ್ಕ ಹಾಗೆ ಅಧಿಕಾರಿಗಳು ಬೀಜ ವಿತರಣೆ ಮಾಡಬೇಕು. ಕಳಪೆ ಗುಣಮಟ್ಟದ ಬೀಜ ವಿತರಣೆ ಮಾಡುವಂತಿಲ್ಲ. ಒಂದು ವೇಳೆ ಬೀಜ ಕಳಪೆ ಇರುವುದು ಗಮನಕ್ಕೆ ಬಂದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ನಾರನಗೌಡ, ಕೃಷಿ ಅಧಿಕಾರಿಗಳಾದ ಮಲ್ಲಿಕಾರ್ಜುನ್, ವಿಕಾಶ್, ಅಕೌಂಟೆAಟ್ ಪ್ರಸಾದ್, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜೀತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಮಂಜನಾಯ್ಕ ಹೆಚ್., ಮುಖಂಡರಾದ ವಿನಾಯಕ ಆರಾಧ್ಯಮಠ, ಹನಗವಾಡಿ ಮಂಜುನಾಥ, ಅಧ್ವೆöÊತ್ ಶಾಸ್ತಿçÃ, ಅಶೋಕ ಕುಂಬಳೂರು, ಗಣೇಶ್, ರೈತರಾದ ಮೈಲಪ್ಪ ಎ.ಕೆ. ಬನ್ನಿಕೊಡು, ಅಶೋಕ ರಾಜನಹಳ್ಳಿ, ಭೀಮಪ್ಪ ಹಾಗೂ ಮತ್ತಿತರಿದ್ದರು.