ರೈತ ಸಂಪರ್ಕ ಕೇಂದ್ರಕ್ಕೆ ಎಪಿಎಂಸಿ ಆವರಣದಲ್ಲಿ ಖಾಲಿ ನಿವೇಶನ ನೀಡಲು ಮನವಿ

ಕೊಟ್ಟೂರು ನ 20 :ಪಟ್ಟಣದ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಚಪ್ಪರದಹಳ್ಳಿ ರಸ್ತೆಯಲ್ಲಿ ಖಾಸಗಿ ಲೇಹೌಟ್ ನಲ್ಲಿ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದು ಈ ಜಾಗ ಪಟ್ಟಣದಿಂದ ದೂರವಾಗಿದ್ದು ರೈತರಿಗೆ ತೀವ್ರತೊಂದರೆಯಾಗುತ್ಕದೆ ಅದ್ದರಿಂದ ಎಪಿಎಂಸಿ ಆವರಣದಲ್ಲಿ ಕಡಿಮೆಧರದಲ್ಲಿ ಖಾಲಿನಿವೇಶನ ನಿಡುವಂತೆ ಎಪಿಎಂಸಿಕಾರ್ಯದರ್ಶಿಗೆ ಮನವಿಸಲ್ಲಿಸಲಾಗಿದೆಎಂದು ತಾಲೂಕು ಕೃಷಿಅಧಿಕಾರಿ ಕೆ.ವಾಮದೇವ ಸಂಜೆವಾಣಿ ಪತ್ರಿಕೆಗೆ ತಿಳಿಸಿದರು.ಎಪಿಎಂಸಿ ಆವರಣದಲ್ಲಿ 100 * 50 ಅಡಿ ಅಳತೆಯ ಸರ್ಕಾರಿ ಧರದಲ್ಲಿ ಖಾಲಿನಿವೇಶನ ನೀಡಿದರೆ ಕಟ್ಟಡನಿರ್ಮಾಣಮಾಡಲು ಇಲಾಖೆಯಿಂದ 50ಲಕ್ಷ ಅನುದಾನ ಬರುತ್ತದೆ ಇದರಿಂದ ರೈತರಿಗೆ ತುಂಬಾ ಅನುಕೂಲ ವಾಗಲಿದೆ ಎಂದರು. ಈ ಸಂದರ್ಭದಲ್ಲಿ ರೈತ ಸಂಪರ್ಕ ಅಧಿಕಾರಿ ಶ್ಯಾಮಸುಂದರ್, ತಿಮ್ಮಣ್ಣ, ರಾಂಪುರ ಕೊಟ್ರೇಶ ಸೇರಿದಂತೆ ಇತರರು ಇದ್ದರು.