ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಸಚಿವರಿಗೆ ಮನವಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.5: ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು ಪ್ರಿಡಮ್ ಪಾರ್ಕನಲ್ಲಿ ನಡೆಯುತ್ತಿರುವ ರೈತರ ಬೇಡಿಕೆಗಳ ಕುರಿತು ಪ್ರತಿಭಟನೆ ಮುಖಾಂತರ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವಿಜಯಪುರ ಜಿಲ್ಲಾಧ್ಯಕ್ಷರಾದ ವಿಜಯ ಪೂಜಾರ ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ ಅತಿಹೆಚ್ಚು ಶೇ-85% ಜನರು ಕೃಷಿಯನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ ದೇಶದ ಒಟ್ಟು ಜನಸಂಖ್ಯೆ 135 ಕೋಟಿ ಅದರಲ್ಲಿ 108 ಕೊಟಿ ಕೃಷಿಯಲ್ಲಿ ಅವಲಂಬಿತರಾಗಿರುತ್ತಾರೆ. ಏಷ್ಯಾಖಂಡದಲ್ಲಿ ಸಮೃದ್ಧವಾದ ಕೃಷಿ ಸಂಪನ್ಮೂಲ ನಮ್ಮ ಭಾರತ ದೇಶದಲ್ಲಿ ನೂರಾರು ನದಿಗಳಿವೆ ಮತ್ತು ಫಲವತ್ತಾದ ಭೂಮಿಯು ಇದೆ ಆದರು ಭಾರತದ ರೈತ ಬಡವ ಕಾರಣ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳು ಅಂದರೆ ನದಿ ನೀರಿನ ಸದ್ಬಳಕೆ ಇಲ್ಲ. ಆಳುವ ಸರ್ಕಾರಗಳು – ರೈತನನ್ನು ಒಂದು ರೀತಿ ದ್ವಿತೀಯ ದರ್ಜೆ ಪ್ರಜೆಯಂತೆ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದು ಆತನನ್ನು ಬಡನದ ಕೂಪದಲ್ಲಿ ತಳ್ಳಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ಕನೂನು ಜಾರಿ ಮಾಡಿ ಗಾಯದ ಮೇಲೆ ಬರೆಯಳೆದಂತೆ ಸದ್ಯದ ಪರಿಸ್ಥಿತಿಯಾಗಿದೆ. ಇಲ್ಲಿವರೆಗೂ ಎಲ್ಲಾ ಸರ್ಕಾರಗಳು ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ – ಹೇಳುತ್ತಾರೆ. ರೈತರಿಂದ ನಾವು ಎಲ್ಲಾ ಒಂದು ಹೊತ್ತಿನ ಊಟ ಮಾಡುತ್ತೇವೆಂದು ಹೇಳಿ ನುಣಚಿಕೊಳ್ಳುತ್ತಾರೆ. ಆದರೆ ರೈತರ ಪರವಾಗಿ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳುವುದಿಲ್ಲ.
ಆದ ಕಾರಣ Pನಾರ್Àಟಕ- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಿನಾಂಕ 3-7-2023 ಸೋಮವಾರದಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ರೈತರ ಹಕ್ಕೋತ್ತಾಯ ಮನವಿ ಪತ್ರ ಸಲ್ಲಿಸಲಾಗಿದ್ದು ಹಾಗೂ ಗಮನಕ್ಕೆ ತರಬಯಸುತ್ತೇವೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಕ್ಕೊತ್ತಾಯಗಳು ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದು ಆದರೆ ರಾಜ್ಯ ಸರಕಾರ ವತಿಯಿಂದ 3 ಕೃಷಿ ಕಾಯ್ದೆಗಳನ್ನು ಕೂಡಲೇ ಸದನದಲ್ಲಿ ಹಿಂಪಡೆದು ಆದೇಶ ಹೊರಡಿಸುವುದು ರೈತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಬರಗಾಲ ಘೋಷಣೆ ಮಾಡಬೇಕು.
ಕೃಷ್ಣ ನದಿಯ ಆಲಮಟ್ಟಿ ಜಲಾಶಯದ ಎತ್ತರವು ಪ್ರಸ್ತುತ 518 ಅಡಿಯಿದ್ದು ಇದನ್ನು 524.256 ಅಡಿಗಳಿಗೆ ಎತ್ತರಿಸುವ ಸಂಬಂಧ ಕೂಡಲೇ ಕಾರ್ಯರೂಪಕ್ಕೆ ತರುವುದು. ಪ್ರದ್ಯುದಾವನೆ ಸರ್ಕಾರದಲ್ಲಿ ಲಭ್ಯವಿದೆ. ಡಾ. ಸ್ವಾಮಿನಾಥನ್ ವದರಿ ಜಾರಿ ಯಾಗಬೇಕು ಹಾಗೂ ರೈತರು ಬೆಳೆದ ಬೆಳಗೆ ಕಾನೂನಾತ್ಮಕ (ಎಂ.ಎಸ್.ಪಿ) ನಿಗದಿಪಡಿಸಬೇಕು. ರಾಷ್ಟ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳಲ್ಲಿ ಇರುವಂತಹ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಬಡ್ಡಿರಹಿತ ಸಾಲ ವಿತರಿಸಬೇಕು. ರಾಜ್ಯ ಸರ್ಕಾರದ ಗೋಮಾಳ ಜಮೀನುಗಳನ್ನು ಯಾವುದೇ ಉದ್ಯಮಿಗಳು ಅಥವಾ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡದೇ ಯಾತಾಸ್ಥಿತಿ ಕಾಪಾಡುವುದು.
ದಹಲಿಯಲ್ಲಿ ನಡೆದ ರೈಸ್ ಚಳುವಳಿಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡುವುದು. ನವದೆಹಲಿ ಜಲಾಶಯಕ್ಕೆ ಹಿಂದಿನ ಸರಕಾರದಲ್ಲಿ ಡಿ.ಪಿಆರ್ ಗೆ 1000 ಕೋಟಿ ಬಿಡುಗಡೆ ಗೊಳಿಸಿದು ಈಗಿನ ಸರಕಾರ ಬಜೆಟ 10 ಸಾವಿರ ಕೋಟಿ ಮಾಡಬೇಕು. ಕಟ್ಟಡ ಕಾರ್ಮಿಕರಿಗೆ ನೀಡುವ ಸವಲತ್ತು ರೈತ ಕೃಷಿ ಕುಲಿ ಕಾರ್ಮಿಕರಿಗೆ ನೀಡಬೇಕು. ಕೃಷಿ ಮತ್ತು ಫಸಲ್ ಭೀಮಾ ಯೋಜನೆಯಿಂದ
ಇದನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವ ಮೂಲಕ ಅನುಕೂಲ ಮಾಡುವುದು. ಪಡಿತರ ಅಕ್ಕಿಯಾಗಿ ಹೊರರಾಜ್ಯದಿಂದ ಖರೀದಿ ಮಾಡಿ ತರುವ ಬದಲಾಗಿ ನಮ್ಮ ರಾಜ್ಯದಲ್ಲಿ ರೈತರು ಬೆಳದೆ ಒಳ್ಳೆಯ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯನ್ನು ರೈತರಿಂದ ನೇರವಾಗಿ ಸರ್ಕಾರ ಖರೀದಿ ಮಾಡಿ ಪಡಿತರ ಮೂಲಕ ಸರಬರಾಜು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರೇಣುಕಾ ಮಣ್ಣೂರ, ಪೀರು ಕೆರೂರ, ಅಮೋಘಸಿದ್ದ ಯಂಕಂಚಿ, ಸಿದ್ದನಗೌಡ ಯಂಕಂಚಿ ಮತ್ತಿತರರು ಉಪಸ್ಥಿತರಿದ್ದರು.