ರೈತ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ನೇಮಕ

ಗಬ್ಬೂರು,ಮೇ.೨೩- ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಾಸುದೇವು ಮೇಟಿ ಅವರ ಆದೇಶದ ಮೇರೆಗೆ ರಾಯಚೂರು ನೂತನ ಯುವ ಜಿಲ್ಯಾಧ್ಯಕ್ಷರಾಗಿ ಮಸ್ತಾನಿ ನಾಯಕ ಖಾನಪೂರು ಹಾಗೂ ದೇವದುರ್ಗ ತಾಲೂಕು ಪದಾಧಿಕಾರಿಗಳಾಗಿ ಜಿಲ್ಲಾಧ್ಯಕ್ಷರಾದ ನರಸಿಂಹ ನಾಯಕ ನೇತೃತ್ವದಲ್ಲಿ ದೇವದುರ್ಗ ಪಟ್ಟಣದ ಜಹೀರಪಾಷ್ ದರ್ಗಾದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವದುರ್ಗ ಅಧ್ಯಕ್ಷ ಸಂಗಮೇಶ ನಾಯಕ, ಸಿರವಾರ ಅಧ್ಯಕ್ಷ ವಿಶ್ವನಾಥ ನಾಯಕ, ಮಾನ್ವಿ ಅಧ್ಯಕ್ಷ ಹನುಮೇಶ, ರಾಯಚೂರು ಅಧ್ಯಕ್ಷ ಶಿವಪ್ಪ ಆಲ್ಕೂರ್,ಕಾರ್ಯದರ್ಶಿಯಾದ ಹಾಜಿಪಾಷ್ ಹುಸೇನ್, ಲಿಂಗಸೂಗುರು ಅಧ್ಯಕ್ಷ ಮೇಟಿ, ಶಿವಕುಮಾರ ನಾಯಕ ಖಾನಾಪೂರ, ರಮೇಶ ಮಡಿವಾಳ, ವೆಂಕಟೇಶ ನಾಯಕ, ತಮ್ಮಣ್ಣ, ಬಸವ ಅಗಸಿಮನೆ, ಬಾಲಪ್ಪ ಉಪ್ಪಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.