ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.25: 25 ರಾಜಾದ್ಯಂತ ಈಗಾಗಲೇ ಮಳೆ ಅಲ್ಪಸ್ವಲ್ಪ ಆಗಿದ್ದು ಭಾಗಹಃ ಬರಗಾಲ ಆವರಿಸಿದೆ. ಕುಡಿಯುವ ನೀರು, ಮೇವಿನ ಕೊರತೆ ಎದ್ದು ಕಾಣುತ್ತಿದ್ದು ಸರ್ಕಾರ ಇದರಲ್ಲಿ ಮುತವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕೆಂದು ಕರ್ನಾಟಕ ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಒತ್ತಾಯಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಕಛೇರಿ ಎದುರಗಡೆ ರಾಜ್ಯ ರೈತ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ಸರ್ಕಾರಕ್ಕೆ ರೈತ ಸಂಘಟನೆಯವರು ಪ್ರತಿಭಟನೆಗಳ ಮೂಲಕ ಬೆಳಗಾವ ಜಿಲ್ಲೆ ಬರಗಾಲ ಘೋಷಣೆ ಮಾಡಿ ಎಂದು ಮನವಿ ಮಾಡಿದರ ಯಾವೊಬ್ಬ ಸಚಿವರು, ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಹೀಗೇ ಏನಾದರೂ ಮುಂದುವರೆದರೆ ರಾಜ್ಯ ರೈತ ಸಂಘಟನೆಗಳಿಂದ ವಿಧಾನಸೌಧದ ಎದುರುಗಡೆ ಪ್ರತಿಭಟಿಸುತ್ತೇವೆಂದು ಸರ್ಕಾರವನ್ನೆಚ್ಚರಿಸಿದರು.
ಈ ಕೂಡಲೇ ಎಚ್ಚೆತ್ತುಕೊಂಡು ಬೆಳಗಾವ ಜಿಲ್ಲೆ ಬರಪೀಡಿತ ವೆಂದು ಘೋಷಿಸಬೇಕು.
ಎಂದು ಉಪವಿಭಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಲ್ಲಿಕಾರ್ಜುನ ವಾಲಿ, ಸೇರಿದಂತೆ ಹಲವಾರು ರೈತ ಮುಖಂಡರು ಸಾರ್ವಜನಿಕರಿದ್ದರು.