ರೈತ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ

ಮುದ್ದೇಬಿಹಾಳ :ನ.24:ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮಾನತುಗೊಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಮೇಟಿ ವಿರುದ್ಧ ಎಫ್.ಐ.ಆರ್ ದಾಖಲಿಸಿದರೂ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿವಿಧಾನಸೌಧ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಹೇಮರಡ್ಡಿ ಮೇಟಿ ನೇತ್ರತ್ವದಲ್ಲಿ ವಿವಿಧ ರೈತ ಸಂಘಟನೆಗಳಿಂದ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಬಸರಕೋಡ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಎಚ್.ಬಿ.ಮೇಟಿ ಅವರು ಮಾತನಾಡಿ ಕಳೇದ 3-4 ತಿಂಗಳ ಹಿಂದೇಯೇ

ತಾಲೂಕಿನ ಬಸರಕೋಡ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘ ಮುಖ್ಯಕಾರ್ಯನಿರ್ವಾಹಕ ಆಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ ಮೇಟಿ ಅವರು ಕರ್ತವ್ಯ ಲೋಪದ ಮೇಲೆ ಆ.16ರಂದು ಅಮಾನತುಗೊಳಿಸಿ ಆದೇಶಿಸಲಾಗಿದೆ.ಕಳೆದ ಮೂರು ತಿಂಗಳಿನಿಂದ ಸಂಘದ ದಾಖಲೆಗಳನ್ನು ಪ್ರಭಾರ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗೆ ದಾಖಲೆಗಳನ್ನು ನೀಡದೇ ಸಂಘದ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ರೈತರ ವ್ಯವಹರಕ್ಕೆ ತೀವೃ ತೊಂದರೆ ಅನುಭವಿಸುವಂತಾಗಿದೆ.

ಇದರಿಂದ ರೈತರಿಗೆ ಅಗತ್ಯವಾದ ಸೇವೆಗಳನ್ನು ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ.ಪ್ರಭಾರಿ ಜವಾಬ್ದಾರಿ ಹೊಂದಿರುವ ಅಧಿಕಾರಿಗೆ ಸಂಘದ ದಾಖಲೆಗಳನ್ನು ಹಸ್ತಾಂತರಿಸುವಂತೆ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಎರಡೆರಡು ಬಾರಿ ವಿನಂತಿಸಿದ್ದರೂ ಅದಕ್ಕೆ ಸ್ಪಂದಿಸದೇ ಉದ್ಧಟತನದ ವರ್ತನೆ ತೋರುತ್ತಿದ್ದಾರೆ ಅದಲ್ಲದೇ ಸಂಘದಲ್ಲಿ 20 ವರ್ಷ ಕೆಲಸ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ಅವ್ಯವಹಾರ ಮಾಡಿ ರಾಜಾರೋಷವಾಗಿ ಊರಿನಲ್ಲಿ ತಿರುಗಾಡುತ್ತಿದ್ದಾನೆ.ಈತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಹಾಗಾಗಿ ಇತನ ಮೇಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸದಿದ್ದರೆ ಸಂಘದ ರೈತರನ್ನು ಕರೆದುಕೊಂಡು ಮುದ್ದೇಬಿಹಾಳದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಛೇರಿ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿ ಮನವಿ ಕೂಡ ಸಲ್ಲಿಸಲಾಗಿತ್ತು ಆದರೂ ಸಹಿತ ಅಶಧಿಕಾರು ಮೌನ ವಹಿಸಿದ್ದು ಗಮನಿಸಿ ಸಧ್ಯ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಇದು ಕೇವಲ ಪ್ರಾರಂಭಿಕ ಹಂತದ ಧರಣಿ ಹೋರಾಟವಾಗಿ ನಮ್ಮ ಓರಾಟಕ್ಕೆ ಅಧಿಕಾರಿಗಳು ಸ್ಪಂದಿಸದೇ ಇದ್ದಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸುವ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆ ಎಂದರು.

ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ತಾಲೂಕಾ ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ, ವಾಯ್ ಕೆ ಬಿರಾದಾರ, ದ್ಯಾಮಣ್ಣ ವಡವಡಗಿ, ಪಿಕೆಪಿಎಸ್ ನ ಸದಸ್ಯರಾದ ಲಕ್ಕಪ್ಪ ಸೋಮನಾಳ, ಸೋಮು ಮೇಟಿ, ಬಸನಗೌಡ ಪಾಟೀಲ, ಯಲ್ಲಪ್ಪ ಚಲವದಿ, ಶಾಂತಪ್ಪ ಸಂಹನಾಳ, ಪಾರ್ವತಿ ಸಾಲಿಮಠ, ಸಿದ್ದಮ್ಮ ಬಿರಾದಾ, ಸನೀಲ ಸೂಳಿಭಾವಿ, ರೈತರಾದ ಪರಮಾನಂದ ಯಾಳವಾರ, ಗೌಡಪ್ಪ ಭಿ ಪಾಟೀಲ, ವಿಜಯಕುಮಾರ ಬಿರಾದಾರ, ಶಂಕ್ರಪ್ಪ ವಡವಡಗಿ, ಬಸು ಮಂಕಣಿ, ಸಂತೋಷ ಸೂಳಿಭಾವಿ ಸೇರಿದಂತೆ ಹಲವರು ಇದ್ದರು.