ರೈತ ವಿರೋಧಿ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು- ಡಿಕೆಶಿ

ಮಸ್ಕಿ,ಮಾ.೩೦- ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಕಾನೂನು ಗಳನ್ನು ಜಾರಿ ಗೊಳಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿವೆ ರೈತ ವಿರೋಧಿ ಸರಕಾರಗಳು ತೊಲಗ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವುಕುಮಾರ್ ಹೇಳಿದರು.
ಮಸ್ಕಿ ವಿಧಾನ ಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ನಾಮ ಪತ್ರ ಸಲ್ಲಿಸಿದ ನಂತರ ತೇರಿನ ಮನೆ ಬಳಿ ನಡೆದ ಕೈ ಕಾರ್ಯಕರ್ತರ ಸಭೆ ಯಲ್ಲಿ ಸೋಮವಾರ ಮಾತನಾಡಿದರು.
ಪ್ರತಾಪಗೌಡ ಪಾಟೀಲ್ ಅವರು ಬಾಂಬೆ ಯಲ್ಲಿ ಬಿಜೆಪಿಗೆ ಸೇಲಾದ ಕಾರಣ ಉಪ ಚುನಾವಣೆ ಬಂದಿದೆ ಮತದಾರರು ಕೊಟ್ಟಿರುವ ತೀರ್ಪು ಧಿಕ್ಕರಿಸಿರುವ ಪ್ರತಾಪಗೌಡ ಪಾಟೀಲ್ ಅವರನ್ನು ಚುನಾವಣೆ ಯಲ್ಲಿ ಸೋಲಿಸಿ ಮನೆ ಯಲ್ಲಿ ಬಡ್ಡಿ ಲೆಕ್ಕ ಹಾಕುತ್ತ ಕುಳಿತುಕೊಳ್ಳು ವಂತೆ ಮಾಡಬೇಕು ಎಂದು ಡಿಕೆಶಿ ಕಾರ್ಯಕರ್ತರಿಗೆ ಕರೆ ಕೊಟ್ಟರು.
ನಾನು ಜಲ ಸಂಪನ್ಮೂಲ ಇಲಾಖೆ ಸಚಿವ ನಾಗಿದ್ದ ವೇಳೆ ಪ್ರತಾಪ ಗೌಡ ಪಾಟೀಲ್ ಒಮ್ಮೆಯಾದರೂ ೫ಎ ಕಾಲುವೆ ಅನುಷ್ಟಾನ ಬಗ್ಗೆ ಮಾತನಾಡಿಲ್ಲ ರೈತ ವಿರೋಧಿ ಪ್ರತಾಪಗೌಡ ಪಾಟೀಲ್ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಉಪ ಚುನಾವಣೆ ನ್ಯಾಯ ದಿಂದ ಮಾಡೋಣ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರ ಗೆಲುವು ಖಚಿತ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಬಸನಗೌಡ ತುರ್ವಿಹಾಳ ಸರಳ ಸಜ್ಜನಿಕೆಯ ವ್ಯಕ್ತಿ ಯಾಗಿದ್ದಾರೆ ಅವರ ಜನ ಬೆಂಬಲಕ್ಕೆ ನಾನು ಬೆರಗಾಗಿದ್ದೆನೆ ನಾನೂ ಕೂಡ ಬಸನಗೌಡ ತುರ್ವಿಹಾಳ ಅಭಿಮಾನಿ ಯಾಗಿದ್ದೆನೆ ಎಂದು ಡಿಕೆಶಿ ಹೇಳಿದರು. ಅಭ್ಯರ್ಥಿ ಬಸನಗೌಡ ತುರ್ವಿಹಾಳ ಮಾತನಾಡಿ ಪ್ರತಾಪಗೌಡ ಪಾಟೀಲ್ ಅಭಿವೃದ್ದಿ ಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಹಣ, ಅಧಿಕಾರದ ಆಸೆಗೆ ರಾಜೀ ನಾಮೆ ನೀಡಿದ್ದಾರೆ.
ಪ್ರತಾಪ ಗೌಡರ ಬೆಂಬಲಿಗರ ಗುಂಡಾಗಿರಿ ಇನ್ಮುಂದೆ ನಡೆಯುದಿಲ್ಲ ಅಧಿಕಾರಿಗಳು ತಪ್ಪು ಮಾಡಿದರೆ ಸಸ್ಸೆಂಡ್ ಮಾಡುತ್ತಾರೆ ರಾಜಕಾರಣಿ ಗಳು ತಪ್ಪು ನಿರ್ಧಾರ ಮಾಡಿದರೆ ಏನು ಮಾಡಬೇಕು ನೀವೆ ಹೇಳಿ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಬಸನಗೌಡ ತುರ್ವಿಹಾಳ ಅವರಿಗೆ ಹಾಲುಮತ ಸಮಾಜದ ವತಿ ಯಿಂದ ೨ ಲಕ್ಷ, ಮಾದಿಗ, ಛಲವಾದಿ ಸಮಾಜಗಳ ವತಿಯಿಂದ ೨.೫೦ ಲಕ್ಷ ರೂ ದೇಣಿಗೆ ನೀಡಲಾಯಿತು.