ರೈತ ವಿರೋಧಿ ಮಸೂದೆ ವಾಪಸ್ ಸಂತಸ – ಎನ್.ಎಸ್.ಬೋಸರಾಜು

ಸಿರವಾರ.ನ೨೦- ಕಳೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಯುವಕರಿಗೆ ಉದ್ಯೋಗ ಸೃಷ್ಟಿ, ರೈತರ ರಕ್ಷಣೆ, ಕಪ್ಪು ಹಣ ತಂದು ಎಲ್ಲರಿಗೂ ೧೫ ಲಕ್ಷ ಕೊಡುವದಾಗಿ ಹೇಳಿದ್ದರು. ಯಾರಿಗೆ ಕೊಟ್ಟಿದ್ದಾರೆ..? ಬಿಜೆಪಿ ರಾಜ್ಯಾದ್ಯಕ್ಷ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಪಂಚಾಯ್ತಿ ಅದ್ಯಕ್ಷರಿಗೆ ಕಾರು, ಸದಸ್ಯರೆಲ್ಲರಿಗೂ ತಿಂಗಳಿಗೆ ೧೦ ಸಾವಿರ ಹಣ ನೀಡಲಾಗುವುದೆಂದು ವಿಧಾನ ಪರಿಷತ್ ಚುನಾವಣೆಗೋಸ್ಕರ ಮತ್ತೆ ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ, ನಿಮ್ಮದೆ ಸರ್ಕಾರ ಇದೆ ಅದನು ಜಾರಿಗೆ ತಂದು ಚುನಾವಣೆಗೆ ಬರಬೇಕಾಗಿತು ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಆರೋಪಿಸಿದರು.
ಪಟ್ಟಣದ ಚುಕ್ಕಿ ತೇಜಸ್ ಮಹಲ್ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ,ಪ್ರದಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ೩ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್? ತೆಗೆದುಕೊಂಡಿರುವುದು ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ದೇಶದ ಜನರಿಗೆ ಅನ್ನ ನೀಡುವ ದೇಶದ ಬೆನ್ನೆಲುಬಾದ ರೈತರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ರೈತರ ಕೃಷಿ ಕಾಯ್ದೆ ಹೋರಾಟದಲ್ಲಿ ೭೦೦ ಜನರು ಮೃತಪಟ್ಟವರಿಗೆ ಯಾರು ಹೊಣೆ..? ಅವರಿಗೆ ಪರಿಹಾರ ನೀಡಬೇಕು, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ಮುಖಂಡು ರೈತರಿಗೆ ಬೆಂಬಲಿಸಿದ್ದರಿಂದ ಈ ಹೋರಾಟಕ್ಕೆ ಜಯ ಸಿಕ್ಕಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸರ್ವಾಧಿಕಾರದ ಆಡಳಿತದ ಮೂಲಕ ವಿರೋಧ ಪಕ್ಷದವರನ್ನು ಕಡೆಗಣಿಸಿ ಕೃಷಿ ಕಾಯ್ದೆ ತಿದ್ದು ಪಡಿ ಮಾಡಿ ರೈತರನ್ನು ಅವಮಾನ ಮಾಡಿದ್ದರು. ಬಿಜೆಪಿ ಆಡಳಿತದಲ್ಲಿ ಪಂಚಾಯ್ತಿ ಆಡಳಿತವನ್ನು ದುರ್ಬಲಗೊಳಿಸುವ ಮೂಲಕ ಗ್ರಾಮೀಣ ಅಭಿವೃದ್ದಿ ವಿರೋಧಿಸುತ್ತಿದ್ದಾರೆ ಎಂದರು.
ಇತ್ತೀಚೆಗೆ ನಡೆದ ೨೯ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಕೇವಲ ೭ ಸ್ಥಾನಗಳನ್ನು ಗೆಲ್ಲಿಸುವದರ ಮೂಲಕ ಬಿಜೆಪಿ ಸರ್ಕಾರವನ್ನು ಜನರು ತಿರಸ್ಕರಿಸುವ ಮುಸೂಚನೆಯ ಎಚ್ಚರಿಕೆ ನೀಡಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ಜನ,ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಸುತ್ತಿದೆ.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಅತೀವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ ನಷ್ಠಕ್ಕೊಳಗಾದ ರೈತರಿಗೆ ನಯಾಪೈಸೆ ನೀಡಿಲ್ಲ ಎಂದು ಆರೋಪಿಸಿದರು.
ಬರೀ ಭಾವನಾತ್ಮಕವಾಗಿ ಜನರನ್ನು ಮರಳು ಮಾಡುವ ಮೂಲಕ ಮತ ಪಡೆಯುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಭ್ರಷ್ಟಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ವಿರುದ್ಧ ದೂರಿದರು.ಗ್ರಾಮಪಂಚಾಯತಿಗಳನ್ನು ಸದೃಡ ಮಾಡಲು ಹಿಂದೆ ರಾಜೀವ್ ಗಾಂದಿಯವರು ಕಾನುನು ರಚನೆ ಮಾಡಿದರು. ಗ್ರಾಮಸ್ವರಾಜ್ಯ ಗಾಂದಿ ಕನಸ್ಸು ರಾಜೀವ್ ಗಾಂದಿ ನನಸ್ಸು ಮಾಡಿದರು. ಯುಪಿ ಸರ್ಕಾರದಲ್ಲಿ ೨೯ ಇಲಾಖೆಯ ಅಧಿಕಾರವನ್ನು ಪಂಚಾಯತಿಗೆ ನೀಡುವ ಮೂಲಕ ಬಲ ಪಡಿಸಿದೆ ನರೇಗಾ ಕಾಂಗ್ರೇಸ್ ಸರ್ಕಾರ ಮಾಡಿದೂ. ಪಂಚಾಯತಿ ರಾಜ್ಯ ವ್ಯವಸ್ತೆಯಲ್ಲಿ ನಂಬಿಕೆ ಇಲ್ಲದೆ ಜಿ.ಪಂ, ತಾ.ಪಂ, ಪ.ಪಂ ಚುನಾವಣೆ ಮುಂದೂಡುತ್ತಿವೆ. ಬಿಜೆಪಿಯ ಮಾತುಗಳ ಮತದಾರರಿಗೆ ಗೊತ್ತಾಅಗಿದೆ. ಗ್ರಾ.ಪಂ ಸದಸ್ಯರಿಗೆ ಅನುದಾನ ಮಂಜೂರು ಮಾಡಿಲ ಮೊದಲು ಅದನು ಬಿಡಿಗಡೆ ಮಾಡಲಿ, ಕಟೀಲ್ ರವರು ನೀಡಿರುವ ಆಶ್ವಾಸನೆ ನಂಬಲು
ಕಲ್ಯಾಣ ಕರ್ನಾಟಕ ಭಾಗದ ಜನರು ದಡ್ಡರಲ. ಜಿಲ್ಲೆಯಲಿ ೬೫೦೦ ಸದಸ್ಯರು ನಮ್ಮ ಪಕ್ಷದ ಅಭ್ಯರ್ಥಿಗಳು, ೭೦% ಮತದರು ಇದ್ದಾರೆ,ಒಂದು ಬಾರಿ ಬಿಟ್ಟರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಇದೇ, ಪಕ್ಷದ ಅಭ್ಯರ್ಥಿ ಗೆಲುವು ಸಾಧ್ಯ
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಹಂಪಯ್ಯನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯನಾಯಕ ಗುಡದಿನ್ನಿ, ರಾಜಾ ವಸಂತನಾಯಕ, ಬ್ರೀಜೇಶ ಪಾಟೀಲ್, ಶಿವಕುಮಾರ ಚುಕ್ಕಿ,ರಮೇಶದರ್ಶನಕರ್,ಕಿರಿಲಿಂಗಪ್ಪ, ತಾ.ಪಂ ಮಾಜಿ ಅದ್ಯಕ್ಷರಾದ ದಾನನಗೌಡ, ಚಂದ್ರಕಳಸ, ಎಂ.ಶ್ರೀನಿವಾಸ,ಶಿವಶರಣಸಾಹುಕಾರ ಅರಕೇರಿ, ಬಸವರಾಜ ದಳಪತಿ, ಎನ್.ಚಂದ್ರಶೇಖರ್,ಕಲ್ಲೂರು ಬಸವರಾಜನಾಯಕ, ನಾಗಪ್ಪ ಪತ್ತಾರ,ಸೂಗಪ್ಪಹೂಗಾರ, ಸೂರಿ ದುರುಗಣ್ಣನಾಯಕ,ವಿರೇಶ ಹಿರೇಮಠ,ವೀರನಗೌಡ,ಪುರಸಭೆ ಸದಸ್ಯ ಶರಣಗೌಡ, , ಪ.ಪಂ ಮಾಜಿ ಸದಸ್ಯರಾದ ನಾಗರಾಜಚಿನ್ನಾನ್, ಇರ್ಪಾನ್, ಮಲ್ಲಪ್ಪ ಎನ್, ಮಾರ್ಕಪ್ಪ,ದೇವಿಪುತ್ರಪ್ಪ, ಹೆಚ್.ಕೆ.ಅಮರೇಶ,ಹೆಚ್.ಕೆ.ರಾಘು,ಹಾಜಿಚೌದ್ರಿ,ಮಹಿಬೂಬ್ ಸಾಬ್ ದೊಡ್ಮನೆ,ಹಸೇನ ಅಲಿ ಸಾಬ್,ಶರಣಪ್ಪ ಮರಾಠ,ಸತ್ತರ ಸಾಬ್ ಗುತ್ತೆದಾರ,ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಇದ್ದರು. ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.