ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಯಚೂರು,ಆ.೭- ಬಿಜೆಪಿ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳನ್ನು ದ್ವೇಷ ರಾಜಕಾರಣದಿಂದ ಕೈಬಿಡಲಾಗಿದ್ದು, ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಕಾನೂನು ರದ್ದು ಪಡಿಸಿದ್ದು ಖಂಡನೀಯ. ಕೃಷಿ ಸಮ್ಮಾನು ಯೋಜನೆಯಲ್ಲಿ ೪. ಸಾವಿರ ರೂ ತಡೆಹಿಡಿದಿದ್ದಾರೆ.೧೧ ಲಕ್ಷ ರೈತರ ಮಕ್ಕಳಿಗೆ ಕೊಡುತ್ತಿದ್ದ ೪೬೮.೬೯ ಕೋಟಿ ವಿದ್ಯಾ ನಿಧಿ ಯೋಜನೆಯನ್ನು ರದ್ದು ಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿದ್ಯಾನಿಧಿ ಯೋಜನೆ ಕೈಬಿಟ್ಟಿದ್ದು, ಗೋ ಶಾಲೆ ರದ್ದು ಪಡಿಸಿದ್ದಾರೆ ಎಂದರು.
ಭೂ ಸಿರಿ ಯೋಜನೆ ಕೈಬಿಟ್ಟಿದ್ದಾರೆ. ೫೧ ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಂತೆ ೪ ಸಾವಿರ ಕಿಸಾನ್ ಸನ್ಮಾನ ಯೋಜನೆಯಿಂದ ಬರುತ್ತಿರುವುದು ತಡೆ ಇದೇ ರೀತಿ ೧೯ ಕ್ಕೂ ಹೆಚ್ಚು ಯೋಜನೆ ಕೈಬಿಟ್ಟು ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಗುಂಗಿನಲ್ಲಿ ಕೃಷಿ ವಲಯವನ್ನೇ ನಿರ್ಲಕ್ಷ್ಯ ಸತ್ತಿರುವುದು ಖಂಡನೀಯ ಮುಂದಿನ ದಿನಗಳಲ್ಲಿ ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಬಿಜೆಪಿ ಕೊಟ್ಟ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಇಲ್ಲವಾದಲ್ಲಿ ರಾಜ್ಯದ ರೈತರೊಂದಿಗೆ ಬೀದಿಗೆ ಇಳಿದು ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಮ್.ಸಿದ್ದನಗೌಡ ನಲಹಾಳ, ಜಂಬಣ್ಣ ಮಲ್ದಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.