
(ಸಂಜೆವಾಣಿ ವಾರ್ತೆ)
ಹಾವೇರಿ,ಆ8: ರಾಜ್ಯ ಕಾಂಗ್ರೇಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಆಡಳಿತ ಕಛೇರಿಯ ಎದುರಿಗೆ ಬಿಜೆಪಿ ರೈತಮೋರ್ಚಾ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕರಾದ ಸಿದ್ದರಾಜ ಕಲಕೋಟಿ ಮಾತನಾಡಿ ರಾಜ್ಯದ ಕಿಸಾನ ಸಮ್ಮಾನ ಯೋಜನೆ ಮತ್ತು ರೈತ ವಿದ್ಯಾನಿಧಿ ಯೋಜನೆ, ಭೂಸಿರಿ ಯೋಜನೆ, ಬೆಂಬಲ ಬೆಲೆ ಮುಂತಾದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹತ್ತು ಹಲವು ಯೋಜನೆಗಳನ್ನು ರದ್ದು ಪಡಿಸುವ ಮೂಲಕ ಕಾಂಗ್ರೇಸ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಈ ಕೂಡಲೆ ಆ ಎಲ್ಲ ರೈತಪರ ಯೋಜನೆಗಳನ್ನು ಮರು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕರಾದ ಶಿವರಾಜ ಸಜ್ಜನರ ಮಾತನಾಡಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಅನೇಕ ಅಭೀವೃದ್ದಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ಕಾಂಗ್ರೇಸ ಸರ್ಕಾರ ಹಿಂಪಡೆದಿದೆ, ಸರ್ಕಾರ ವಗಾವಣೆ ದಂದೇ ಮತ್ತು ಕಮಿಷನ ವಸೂಲಿಯಲ್ಲಿ ಮಗ್ನವಾಗಿದೆ.
ಪ್ರತಿಭಟನೆಯ ನೇತ್ರತ್ವವಹಿಸಿದ್ದ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ ರಾಜ್ಯದ ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಅತೀಹೆಚ್ಚು ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ಆಗಿದ್ದು ಸರ್ಕಾರದ ರೈತ ವಿರೋಧಿ ನೀತಿಯೇ ಇದಕ್ಕೆ ಕಾರಣ. ಹಸಿರು ಬರಗಾಲ ಇದ್ದು ಈವರೆಗೆ ಹಾನಿಗೆ ಸಮೀಕ್ಷೆ ಆಗಿಲ್ಲ, ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿದ್ದು ರೈತ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದ್ದಾನೆ, ರೈತನ ಸಹಯಕ್ಕೆ ಧಾವಿಸಬೇಕಾಗಿದ್ದ ಸರ್ಕಾರ ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಂಡು ಕುಳಿತಿದೆ ಈಗಲಾದರೂ ಸರ್ಕಾರ ಎಚ್ಚೆತ್ತು ರೈತರಿಗೆ ಪರಿಹಾರವನ್ನು ಈ ಕೂಡಲೇ ವಿತರಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸಭೇಯನ್ನುದ್ದೆಶಿಸಿ ಮುಖಂಡರಾದ ಪಾಲಾಕ್ಷಗೌಡ ಪಾಟೀಲ, ಗವಿಸಿದ್ದಪ್ಪ ದ್ಯಾಮಣ್ಣವರ, ನೀಲಪ್ಪ ಈಟೇರ, ಕೆ ಶಿವಲಿಂಗಪ್ಪ, ಗಂಗಮ್ಮ ಹಾವನೂರು, ಶಿವಾನಂಧ ಮ್ಯಾಗೇರಿ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಉಪಾದ್ಯಕ್ಷರಾದ ಭೊಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶೀಗಳಾದ ಕೃಷ್ಣಾ ಈಳಗೇರ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಚಿನ್ನಿಕಟ್ಟಿ, ಹನುಮಂತ ತಳವಾರ, ಮಂಡಲಗಳ ಅಧ್ಯಕ್ಷರಾದ ಬಸವರಾಜ ಕಳಸೂರ, ಬಸವರಾಜ ಕೇಲಗಾರ, ದೀಪಕ ಹರಪನಹಳ್ಳಿ, ಗಂಗಾಧರ ಬಾಣದ ಮತ್ತಿತರರು ಇದ್ದರು.