ರೈತ ವಿರೋಧಿ ಧೋರಣೆ ಮಹಿಳಾ ರೈತರ ಆಕ್ರೋಶ

ಕೋಲಾರ.ಏ.೩೦-ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ತೋಟಗಳಲ್ಲಿಯೇ ಬಿಟ್ಟು, ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಏಕಾಏಕಿ ರಸಗೊಬ್ಬರ ಏರಿಕೆ ಮಾಡುವ ಜೊತೆಗೆ ಸರ್ಕಾರ ಈಗ ಹನಿನೀರಾವರಿಗೆ ಇರುವ ರಾಜ್ಯದ ಪಾಲಿನ ಸಬ್ಸಿಡಿಯನ್ನು ಕೈಬಿಡಲು ತಿರ್ಮಾನಿಸಿರುವುದು
ಖಂಡನೀಯ, ಈ ರೈತ ವಿರೋಧಿ ಧೋರಣೆಯನ್ನು ಕೂಡಲೇ ಕೈಬಿಡಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿ ಕೋರೊನಾ ಸಂಕಷ್ಟದಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆಯಿಲ್ಲ, ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ, ಸರ್ಕಾರ ಕೋರೋನಾ ಸಂಧರ್ಭವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ರಸಗೊಬ್ಬರ ಬೆಲೆ ಏಕಾಏಕಿ ಏರಿಕೆಯಿಂದ ರೈತರು ಕಂಗಾಲಾಗಿರುವ ಬೆನ್ನಲ್ಲೇ ಹನಿ ನೀರಾವರಿಯಲ್ಲಿ ರೈತರಿಗೆ ನೀಡುತ್ತಿದ್ದ ಸಬ್ಸಿಡಿಯಲ್ಲಿ ರಾಜ್ಯದ ಶೇ.೪೦% ಪಾಲನ್ನು ಕಡಿತ ಮಾಡಲು ಮುಂದಾಗಿರುವುದು ರೈತ ವಿರೋಧಿ ಧೋರಣೆಯಾಗಿದೆ. ರೈತ ತೋಟಗಾರಿಕೆ, ರೇಷ್ಮೇ, ಕೃಷಿ ಬೆಳೆಗಳ ಉತ್ತೇಜನಕ್ಕೆ ಹನಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದು, ಕೇಂದ್ರದ ಪಾಲು ಶೇ.೫೦% ಇದ್ದು, ರಾಜ್ಯದ ಪಾಲು ಶೇ.೪೦% ರಷ್ಟಿದ್ದು,ಇನ್ನೂಳಿದ ಶೇ.೧೦ % ರಷ್ಟು ರೈತರು ಭರಿಸುತ್ತಿದ್ದು, ರೈತರು ಡ್ರೀಪ್ ಅಳವಡಿಕೆಯ ನಂತರ ಪ್ರೋತ್ಸಾಹದನ ಬಿಡುಗಡೆಯಾಗುತ್ತಿತ್ತು, ಈ ಯೋಜನೆಯಿಂದ ೨.೫ ಎಕರೆಯವರೆಗೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲ ಪಡೆಯುತ್ತಿದ್ದು, ಈಗ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಬೀದಿಗೆ ತರಲು ಹೊರಟಿದೆ
ಸರ್ಕಾರ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಈ ಆಧೇಶವನ್ನು ವಾಪಸ್ಸು ಪಡೆದು ರಸಗೊಬ್ಬರಗಳ ಬೆಲೆ ಇಳಿಕೆ ಮಾಡುವ ಜೊತೆಗೆ ಈ ಹಿಂದೆ ಹನಿ ನೀರಾವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ನೀಡಿ, ಈ ರೈತ ವಿರೋದಿ ಧೋರಣೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.