ರೈತ ವಿರೋಧಿ ಕಾಯ್ಧೆಗಳ ರದ್ದತಿಗೆ ಆಗ್ರಹ

ಬಳ್ಳಾರಿ ಜೂ 05 : RKS(AIKKMS) ) ವತಿಯಿಂದ ಕಾರ್ಪೊರೆಟ್ ಕಂಪೆನಿಗಳನ್ನು ಓಡಿಸಿ, ಕೃಷಿಯನ್ನು ಉಳಿಸಿ – ಸಂಪೂರ್ಣ ಕ್ರಾಂತಿ ದಿನ ಅಂಗವಾಗಿ ಬಳ್ಳಾರಿ ಹಾಗೂ ಜಿಲ್ಲೆಯ ಶ್ರೀಧರಗಡ್ಡೆ, ಕೋಳೂರು, ಕೋರ್ಲಗುಂದಿ ಮತ್ತು ವಿವಿದ ಹಳ್ಳಿಗಳಲ್ಲಿ ರೈತರಿಗೆ ಮರಣಶಾಸನವಾಗಿರುವ ಮೂರು ಕರಾಳ ಕಾಯ್ದೆಗಳಾದ ಎ.ಪಿ.ಎಮ್.ಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಪ್ರತಿಯನ್ನು ದಹನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಅಕ್ರೋಶ ವ್ಯಕ್ತ ಪಡಿಸಿದರು.
ಖಏS ಜಿಲ್ಲಾ ಕಾಂರ್ಯದರ್ಶಿಗಳಾದ ಇ.ಹನುಮಂತಪ್ಪ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ ಕಳೆದ ವರ್ಷ ಇದೇ ದಿನ, ಅಂದರೆ 2021ರ ಜೂನ್ 5ರಂದು ಬಿಜೆಪಿಯ ಮೋದಿ ಸರ್ಕಾರವು ಕೃಷಿಯ, ರೈತರ ಹಾಗೂ ದೇಶದ ಜನಸಾಮಾನ್ಯರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಹಠಾತ್ತಾಗಿ ಮೂರು ಸುಗ್ರೀವಾಜ್ಞೆಗಳನ್ನು ತಂದಿತು. ಈ ಸುಗ್ರೀವಾಜ್ಞೆಗಳಿಗೆ ನಂತರದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳ ರೂಪ ಕೊಡಲಾಯಿತು. ಅದರ ವಿರುದ್ಧ ನಾವೆಲ್ಲ ಒಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಪತಾಕೆಯಡಿ ಹೋರಾಡುತ್ತಿದ್ದೇವೆ.
ಈ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಾಗಿನಿಂದ ನಮ್ಮ ಸಂಘಟನೆ ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನ್ (ಎಐಕೆಕೆಎಂಎಸ್ – ಕರ್ನಾಟಕದಲ್ಲಿ ಆರ್‍ಕೆಸ್) 21 ರಾಜ್ಯಗಳಲ್ಲಿ ರೈತ ಚಳುವಳಿಗಳ ಮಧ್ಯೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಘಟನೆಯು 1974-75ರಲ್ಲಿ ನಡೆದ ಜೆಪಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. 2017ರಿಂದಲೂ ನಮ್ಮ ನಾವು ಚಳುವಳಿಯ ಜಂಟಿ ವೇದಿಕೆ ಮತ್ತು ಈಗ ಸಂಯುಕ್ತ ಕಿಸಾನ್ ವೋರ್ಚಾದ (ಎಸ್‍ಕೆಎಮ್) ಮುಖ್ಯ ಭಾಗವಾಗಿರುವ ಎಐಕೆಎಸ್‍ಸಿಸಿ ಯಲ್ಲಿ ಪ್ರಮುಖ ಭಾಗೀದಾರರಾಗಿದ್ದೇವೆ ಎಂದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯ ಮುಂದಿನ ಭಾಗವಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಅಂಗವಾದ ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನ್‍ಯು 2021ರ ಜೂನ್ 5 ‘ಸಂಪೂರ್ಣ ಕ್ರಾಂತಿ’ ದಿನವಾಗಿ ದೇಶದಾದ್ಯಂತ ಆಚರಿಸಲು ಕರೆ ನೀಡಿದರು ಎಂದಿದ್ದಾರೆ.
RKS ಜಿಲ್ಲಾ ಮುಖಂಡರಾದ ಗೋವಿಂದ್ ಅವರು ಮಾತನಾಡುತ್ತಾ ಜೂನ್ 5 ರಂದು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ಬಿಜೆಪಿ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ದೇಶದಾದ್ಯಂತ ರೈತರು ಮೂರು ಕರಾಳ ಕಾಯ್ದೆಗಳನ್ನು ಹಾಗೂ ವಿದ್ಯುತ್ ಕಾಯ್ದೆಗಳನ್ನು ಸುಟ್ಟು ‘ಸಂಪೂರ್ಣ ಕ್ರಾಂತಿ’ ದಿನದ ಸಂದರ್ಭದಲ್ಲಿ ‘ಕಾರ್ಪೊರೆಟ್ ಕಂಪೆನಿಗಳನ್ನು ಒದ್ದೋಡಿಸಿ-ಕೃಷಿ ಉಳಿಸಿ’ ಎಂದು ಮರುಪ್ರತಿಜ್ಞೆ ಮಾಡಲು ಸಂಪೂರ್ಣವಾಗಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ RKS ಜಿಲ್ಲಾ ಸಮಿತಿ ಸದಸ್ಯರಾದ ಬಸಣ್ಣ, ಪಂಪಾಪತಿ ಮತ್ತು ರೈತರು ಭಾಗವಹಿಸಿದ್ದರು.