ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು : ಕೆ.ಸಿ.ಹೊರಕೇರಪ್ಪ

ಹಿರಿಯೂರು.ಮಾ.27: ರೈತ ವಿರೋಧಿ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಸರ್ಕಾರವನ್ನು ಒತ್ತಾಯಿಸಿದರು. ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ರಾಷ್ಟçವ್ಯಾಪಿ ಹೋರಾಟ ಮತ್ತು ದೆಹಲಿಯಲ್ಲಿ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಗರದ ನೆಹರು ಮಾರುಕಟ್ಟೆ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಈಗಾಗಲೇ 121 ದಿನಗಳಿಂದ ರೈತರು ಹೋರಾಟ ಮಾಡುತ್ತಾ ಬಂದಿದ್ದೇವೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರೈತರ ಮೇಲೆ ಕರುಣೆ ಇಲ್ಲ. ಸ್ವಾಮಿನಾಥನ್ ವರದಿ ಬಗ್ಗೆ ಮಾತನಾಡುತ್ತಿಲ್ಲ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳೇ ನಡೆಯುತ್ತಿವೆ ಜನಪ್ರತಿನಿಧಿಗಳ ಕೆಲಸ ಇದೇನಾ ಎಂದು ಪ್ರಶ್ನಿಸಿದರು. ಮಾಜಿ ಅಧ್ಯಕ್ಷರಾದ ಕೃಷ್ಣಸ್ವಾಮಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಅಲ್ಲಿಯವರೆಗೂ ಹೋರಾಟ ಮುಂದುವರೆಯುತ್ತಿದೆ ರೈತರಿಗೆ ತುಂಬಲಾರದ ನಷ್ಟ ಸಂಭವಿಸಲಿದೆ ಉಚಿತ ವಿದ್ಯುತ್ ನಿಲುಗಡೆಯಾಗಲಿದೆ ರೈತರು ಬದುಕುವುದು ತೀರಾ ಸಂಕಷ್ಟವಾಗಿದೆ ಎಂದು ಹೇಳಿದರು. ನಮ್ಮ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ದಾದಾಪೀರ್ (ತಿರುಪತಿ) ಇವರು ಮಾತನಾಡಿ ಪ್ರಧಾನಿ ಮೋದಿಯವರು ಅಚ್ಛೇದಿನ್ ಎನ್ನುತ್ತಾರೆ ಆದರೆ ಮಣ್ಣಲ್ಲಿ ಅನ್ನ ಬೆಳೆವ ರೈತರು ಮಣ್ಣುಪಾಲಾಗುತ್ತಿದ್ದಾರೆ ಈ ಕಡೆ ಗಮನಹರಿಸುತ್ತಿಲ್ಲ ಜೀವನಾವಶ್ಯಕ ವಸ್ರತುಗಳು ಅಡಿಗೆ ಅನಿಲ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ ಇದೇನಾ ಅಚ್ಛೇದಿನ್ ಎಂದು ಪ್ರಶ್ನಿಸಿದರು. ರೈತ ಸಂಘದ ಅಧ್ಯಕ್ಷ ಬಿ.ಓ.ಶಿವಕುಮಾರ್ ಮಹಿಳಾ ಅಧ್ಯಕ್ಷೆ ಕಲ್ಪನಾ ಮತ್ತಿತರರು ಮಾತನಾಡಿದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಘಭೂಷಣ್, ಗೋವಿಂದರಾಜ್, ಜಿ.ಹೆಚ್.ಗೌಡ್ರು, ದಸ್ತಿಗಿರಿಸಾಬ್, ಚೇತನ್, ರಮೇಶ್, ಶಿವಲಿಂಗಪ್ಪ, ಮುತ್ತು, ಮೂರ್ತಪ್ಪ, ಹನುಮಂತಪ್ಪ, ಎಂ.ಕೆ. ಜಾಫರ್, ಅನ್ವರ್ ಬಾಷ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸದಸ್ಯರು ಭಾಗವಹಿಸಿದ್ದರು.