ರೈತ ವಿರೋಧಿ ಕಾನೂನುಗಳ ವಿರುದ್ಧದ ಪಾದಯಾತ್ರೆ ನಾಡಿದ್ದು ನಗರದಲ್ಲಿ ಸಮಾರೋಪ

ಬಳ್ಳಾರಿ ಮಾ21 : ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ದ ಹೋರಾಟ ಮಾಡುತ್ತಿರುವ ದೇಶದ ರೈತರ ಹೋರಾಟವನ್ನು ಬೆಂಬಲಿಸಿ. ದೇಶದ ರೈತರ ಉಳುವಿಗಾಗಿ, ಬದುಕಿಗಾಗಿ ನಮ್ಮ ಜಲ, ನಮ್ಮ ಕೃಷಿ, ನಮಗೆ ಉಳಿಯಲು ರಾಜ್ಯದ ಬಸವಕಲ್ಯಾಣದಿಂದ ಆರಂಭಗೊಂಡ ರೈತ ನಡಿಗೆ ನಾಡಿದ್ದು ಬಳ್ಳಾರಿ ನಗರಕ್ಕೆ ಬಂದು ತಲುಪಲಿದೆ.
ಈ ಬಗ್ಗೆ ಇಂದು ಪತ್ರಿಕಾ ಭವನದಲ್ಲಿ ರೈತ ಪಾದಯಾತ್ರೆಯನ್ನು ಆಯೋಜಿಸಿರುವ ಪ್ರೊ.ನಂಜುಂಡಸ್ವಾಮಿ‌ ಬಣದ ರೈತ ಸಂಘದ ಹಾಗು ಚಾಗನೂರು ಸಿರಿವಾರ ಭೂ ರಕ್ಷಣ ಹೋರಾಟ ಸಮಿತಿಯ ಮುಖಂಡರು ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರು ಪಾದಯಾತ್ರೆ ಬಗ್ಗೆ ತಿಳಿಸುತ್ತ.
ದೇಶದ ಬೆನ್ನೆಲುಬು ರೈತ, ಆದರೆ ಅಂತಹ ರೈತನ‌ಬೆನ್ನೆಲುಬನ್ನೆ ಮುರಿಯುವಂತಹ ಕಾನೂನುಗಳನ್ನು ಕಾರ್ಪೋರೆಟ್ ವಲಯದ ಪರವಾಗಿ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ದ ನಮ್ಮ ಈ ಹೋರಾಟವಾಗಿದೆ.
ದಲ್ಲಾಳಿಗಳನ್ನು ಹೋಗಲಾಡಿಸಲು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆಂದು ಪ್ರಧಾನಿಗಳು ಹೇಳುತ್ತಾರೆ. ಆದರೆ, ಸ್ಪಾನ್ಸ ರ್ಸ್, ಸರ್ವೀಸ್ ಪ್ರೊವೈಡರ್, ಅಗ್ರಿಗೇಟರ್ ಎಂಬ ಪರ್ಯಾಯ ಪದಗಳ‌ ಮೂಲಕ‌ ಕಾರ್ಪೊರೇಟ್ ದಲ್ಲಾಳಿಗಳನ್ನು ಹುಟ್ಟು ಹಾಕುತ್ತಿದ್ದಾರೆಂದರು.
ರೈತ ವಿರೋಧಿಯಾದ ಕಾನೂನುಗಳ ‌ಬಗ್ಗೆ ಜನರಿಗೆ ತಿಳಿಸುತ್ತ. ಮತ್ತು ಈಗ ನಡೆಯುತ್ತಿರುವ ದೇಶದಲ್ಲಿನ ರೈತರ ಹೋರಾಟವನ್ನು ಬೆಂಬಲಿಸಲು ಮಾ. 5 ರಿಂದ ಬಸವಕಲ್ಯಾಣದಿಮನದ ಬಳ್ಳಾರಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿತ್ತು.
ನಾಡಿದ್ದು ಮಾ.23 ರಂದು ಪಾದಯಾತ್ರೆ ಬಳ್ಳಾರಿಗೆ ತಲುಪಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.
ಇದರಲ್ಲಿ ಸಾಹಿತಿ ಸಾ.ರಘುನಾಥ್, ದೇಶದ ರೈತ ಸಂಘಟನೆಗಳ ಸಹ ಸಂಚಾಲಕರಾದ ಎಸ್.ಜಾನ್ಸಿ, ರಾಜ್ಯ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನ್ಯಾಯವಾದಿ ಭಾಸ್ಕರ್ ರಾವ್, ಸಾಹಿತಿ ಸೂರ್ಯಸಾಗರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಪಾದಯಾತ್ರೆ ಇಂದು ಬಳ್ಳಾರಿ ತಾಲೂಕಿನಲ್ಲಿ ಸಂಚರಿಸುತ್ತಿದ್ದು ರಾತ್ರಿ ಚಾಗನೂರಿನಲ್ಲಿ ತಂಗಲಿದೆ. ನಾಳೆ ಚಾಗನೂರಿನಿಂದ ರಾತ್ರಿ ವೇಳೆಗೆ ಬಳ್ಳಾರಿ ನಗರದ ಬೈಪಾಸ್ ರಸ್ತೆಯ ಗಂಗಮ್ಮವ್ವ ಮಠಕ್ಕೆ ಬಂದು‌ತಲುಪಲಿದೆ.
ಸುದ್ದಿಗೋಷ್ಟಿಯಲ್ಲಿ ಹುಲುಗಯ್ಯ, ಕೋದಂಡರಾಮ, ಕೆ.ನಾಗರಾಜ್, ಲೇಪಾಕ್ಷಿ ಅಸುಂಡಿ, ಜಿ.ಟಿ. ಎರ್ರಿಸ್ವಾಮಿ, ಕೆ.ವೆಂಕಟ ಸೀತರಾಮಯ್ಯ ಮೊದಲಾದವರು ಇದ್ದರು.