ರೈತ ಮೋರ್ಚಾ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ : ಪಾಟೀಲ್ ಖಂಡನೆ

ಬೀದರ್:ನ.13:ರೈತ ಮೋರ್ಚಾ ರಾಜ್ಯ ಅಧ್ಯಕ್ಷರಾದ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ತಮ್ಮ ಕೆಲಸದ ನಿಮಿತ್ತ ಕಲ್ಲೋಳ್ಳಿಗೆ ತೆರಳುತ್ತಿರುವ ಸಮಯದಲ್ಲಿ ಮಾರ್ಗದ ಮಧ್ಯೆ ಸತೀಶ್ ಜಾರಕಿಹೊಳೆಯ ಬೆಂಬಲಿತ ಗೊಂಡಾಗಳು ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿ ಈರಣ್ಣ ಕಡಾಡಿ ಅವರಿಗೆ ಮತ್ತು ಬಿಜೆಪಿ ನಾಯಕರ ವಿರುದ್ಧ ಘೋಷÀಣೆಗಳನ್ನು ಕೂಗಿ ಹಲ್ಲೆಗೆ ಮುಂದಾಗಿದ್ದನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕುಶಾಲ್ ಪಾಟೀಲ್ ಗಾದಗಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ರೈತ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಕಾರನ್ನು ಅಡ್ಡಗಟ್ಟಿ ಸತೀಶ್ ಜಾರಕಿಹೊಳೆಯ ಬೆಂಬಲಿತ ಗೂಂಡಾಗಳು ಇಂತಹ ಕೃತ್ಯವನ್ನು ಮಾಡುವುದು ಸತೀಶ್ ಜಾರಕಿಹೊಳೆಗೆ ಶೋಭೆ ತರುವಂತದ್ದಲ್ಲ. ಭ್ರಷ್ಟಾಚಾರವನ್ನು ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿರುವ ವಿಚಾರವಾದಿ ಎಂಬ ಮುಖವಾಡ ಧರಿಸಿರುವ ಸತೀಶ್ ಜಾರಕಿಹೊಳಿ ದಲಿತ ಸಂಘಟನೆಗಳ ಹೆಸರಿನಲ್ಲಿ ಒಬ್ಬ ರಾಜ್ಯ ಸಭಾ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಸತೀಶ್ ಜಾರಕಿ ಹೊಳಿ ಅಂತಹ ವ್ಯಕ್ತಿಗಳು ಮುಗ್ಧ ದಲಿತ ಮುಖಂಡರನ್ನು ಬಳಸಿಕೊಂಡಿರುವುದು ಇದು ದಲಿತರಿಗೆ ಮಾಡಿರುವ ಅಪಮಾನ ಎಂದಿದ್ದಾರೆ.

ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕøತಿಯಿಂದ ಪ್ರಜಾಪ್ರಭುತ್ವ ಹತ್ತಿಕ್ಕುವಂತಹ ಕೆಲಸದಲ್ಲಿ ನಿತ್ಯ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಪ್ರತಿಭಟನೆಗಳು ಜನ ಪರವಾಗಿರಬೇಕು. ಆದರೆ, ಧ್ವೇಷÀ ಸಾಧನೆಗೋಸ್ಕರ ಬಳಸಿಕೊಂಡಿರುವುದು ಜಾರಕಿಹೊಳೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಇಂತಹ ಹೆಯ ಕೃತ್ಯವನ್ನು ಯಾವೊಬ್ಬ ಪ್ರಜೆಯೂ ಸಹಿಸತಕ್ಕಂತದ್ದಲ್ಲ. ತಮ್ಮ ಮನಸ್ಥಿತಿಯನ್ನು ಸರಿ ಪಡಿಸಿಕೊಳ್ಳದಿದ್ದರೆ ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ನಡೆದರೆ ರಾಜ್ಯ ರೈತ ಮೋರ್ಚಾ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಶಾಲ್ ಪಾಟೀಲ್ ಗಾದಗಿ ತಿಳಿಸಿದ್ದಾರೆ.