ರೈತ ಮುಖಂಡ ಯಲ್ಲಪ್ಪ ಹೆಗ್ಗಡೆ ಮೇಲಿನ ಹಲ್ಲೆ ಖಂಡಿಸಿ ಹೆದ್ದಾರಿ ಬಂದ್

ಇಲಕಲ್:ಆ.30: ಬೀಳಗಿ ತಾಲೂಕಿನ ರೈತ ಸಂಘದ ಪ್ರಮುಖ ಕಳೆದ ವಿಧಾನಸಭೆ ಚುನಾವಣೆಯ ಬೀಳಗಿ ಕ್ಷೇತ್ರದ ಅಭ್ಯರ್ಥಿ ಯಲ್ಲಪ್ಪ ಹೆಗ್ಗಡೆ ಮೇಲೆ ನಡೆದ ಹಲ್ಲೆಯನ್ನು ಇಳಕಲ್ ತಾಲೂಕು ರೈತ ಸಂಘ ಮತ್ತು ಹಸಿರುಸೇನೆಯ ಪದಾಧಿಕಾರಿಗಳು ರಸ್ತಾ ರೋಖೋ ನಡೆಸಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗುರು ಗಾಣಿಗೇರ ತಾಲೂಕಾ ಅಧ್ಯಕ್ಷ ಮೋಹಸೀನ್ ನದಾಫ್, ಪದಾಧಿಕಾರಿಗಳಾದ ರಸೂಲಸಾಬ ತಹಸೀಲ್ದಾರ, ಬಸನಗೌಡ ಪಾಟೀಲ ಕಿಲ್ಲಾ ,ಬಸವರಾಜ ಪೈಲ್, ದೊಡ್ಡಪ್ಪ ಕವಡಿಮಟ್ಟಿ, ರಾಜಮಹ್ಮದ ನಧಾಪ್, ಮಹಾಂತಪ್ಪ ಐಹೊಳೆ, ಮಹಾಂತಪ್ಪ ಬಿಸಲದಿನ್ನಿ, ಮತ್ತಿತರರು ಇದ್ದರು.
ನಂತರ ಮನವಿಪತ್ರವನ್ನು ತಹಸೀಲ್ದಾರ ಕಚೇರಿಯ ಗ್ರೇಡ್ ಟು ತಹಸೀಲ್ದಾರ ಚಿದಾನಂದ ವಡವಡಗಿ ಅವರಿಗೆ ಸಲ್ಲಿಸಿದರು ಪಿ ಎಸ್ ಐಗಳಾದ ಕೃಷ್ಣವೇಣಿ ಗುರ್ಲಹೊಸೂರ ಮತ್ತು ಅಪರಾಧ ವಿಭಾಗದ ಶಾಂತಾ ಹಳ್ಳಿ ಹಾಗೂ ಪೆÇೀಲಿಸರು ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.