ರೈತ ಮಹಿಳೆಯ ಕೂಗಿಗೆ ಸ್ಪಂದಿಸದ ಅಧಿಕಾರಿಗಳು

ಚಿತ್ತಾಪುರ:ಅ.28: ಸುಮಾರು ವರ್ಷಗಳಿಂದ ಹೊಲದಲ್ಲಿ ನೀರು ನಿಂತು ಬೆಳೆದ ಬೆಳೆ ಹಾನಿಗೊಳಗಾಗಿ ನಷ್ಟವಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದಂಡೋತಿ ಗ್ರಾಮದ ರೈತ ಮಹಿಳೆ ಶಿವಕಾಂತಮ್ಮ ಕಂಕನಹಳ್ಳಿ ತಮ್ಮ ಅಳಲನ್ನು ತೋಡಿಕೊಂಡರು.

ತಾಲೂಕಿನ ದಂಡೋತಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿ 126ರ ರಸ್ತೆ ನಿರ್ಮಿಸುವಾಗ ಲೋಕೋಪಯೋಗಿ ಇಲಾಖೆ ಎಡವಟ್ಟಿನಿಂದ ಸರ್ವೆ ನಂ 46ರ 4 ಎಕರೆ ಜಮೀನಿನ ಹೊಲದ ಬದಿಯಲ್ಲಿ ಹೊಲದಲ್ಲಿ ನೀರು ನಿಲ್ಲದೆ ನೀರು ಸರಾಗವಾಗಿ ಹರಿದುಹೋಗುತ್ತಿತ್ತು ಆದರೆ ರಸ್ತೆ ನಿರ್ಮಿಸುವಾಗ ಸರಾಗವಾಗಿ ನೀರು ಹರಿದು ಹೋಗುವ ದಾರಿ ಬಂದ್ ಮಾಡಿ ರಸ್ತೆ ಮಾಡಿರುವುದರಿಂದ ಹೊಲದಲ್ಲಿ ನೀರು ನಿಂತು ರೈತ ಮಹಿಳೆಯ ಹೊಲದಲ್ಲಿ ಪ್ರತಿವರ್ಷ ಬೆಳೆನಷ್ಟ ಆಗುತ್ತಿರುವುದರಿಂದ ರೈತ ಮಹಿಳೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪ ವಿಭಾಗ ಚಿತ್ತಾಪುರ್ ಇವರಿಗೆ 2017ರಿಂದ ಇಲ್ಲಿವರೆಗೆ ಸಲ್ಲಿಸಿದ್ದೇವೆ ಅಷ್ಟೇ ಅಲ್ಲದೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೂ ಹಲವು ಬಾರಿ ಮನವಿ ಪತ್ರಗಳು ಸಲ್ಲಿಸಿದರೂ ಸಹ ಇಲ್ಲಿವರೆಗೂ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ನಾವು ಯಾರಿಗೆ ಕೇಳಬೇಕು ನಮ್ಮ ಕೂಗು ಅವರಿಗೆ ಕೇಳುವುದಿಲ್ಲವೇ ಎಂದು ರೈತ ಮಹಿಳೆ ಕಣ್ಣೀರು ಹಾಕಿದರು.

ಪ್ರತಿ ವರ್ಷಕ್ಕೆ 10 ಚೀಲ ತೊಗೋರಿ ಆಗುತ್ತಿತ್ತು ಆದರೆ ಈಗ 3 ಚೀಲ ತೊಗರಿ ಸಿಗುವುದು ಕಷ್ಟವಾಗಿದೆ.
ಈ ವರ್ಷ ಕಾಗಿಣಾ ನದಿಯ ಪ್ರವಾಹದಿಂದ ಆಗಿ ಹೊಲದಲ್ಲಿ ಬೆಳೆದ ಬೆಳೆಯ ನಾಶವಾಗಿದ್ದು ಮತ್ತಷ್ಟು ಕಷ್ಟದ ಮೇಲೆ ಕಷ್ಟ ಬಂದಂತಾಗಿದೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ನನ್ನ ಹೊಲದಲ್ಲಿ ನಿಲ್ಲುತ್ತಿರುವ ನೀರು ಸುಗಮವಾಗಿ ಹರಿದು ಬೇರೆಡೆ ಹೋಗುವಂತೆ ಮಾಡಿ ಮೊದಲಿದ್ದಂತೆ ರಸ್ತೆಯಲ್ಲಿ ಸಿಮೆಂಟ್ ಪೈಪ್ ಹಾಕಿ ನೀರು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.


ರೈತ ಈ ದೇಶದ ಬೆನ್ನೆಲುಬು ಎಂದು ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳು ಹೇಳುತ್ತಾರೆ ಆದರೆ ರೈತರ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

-ಜಗನ್ನಾಥ್ ಕಂಕನಹಳ್ಳಿ
ರೈತ ಮಹಿಳೆಯ ಮಗ ದಂಡೋತಿ.